ಸಾಂದರ್ಭಿಕ ಚಿತ್ರ
ಗುಳೇದಗುಡ್ಡ: ತಾಲ್ಲೂಕಿನಲ್ಲಿ ಹರಿದ ಮಲಪ್ರಭಾ ನದಿಯಲ್ಲಿ ನೀರು ಖಾಲಿಯಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದರಿಂದ ಅ.17 ರ ಸಂಜೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 1000 ಕೂಸೆಕ್‌ದಂತೆ ಒಟ್ಟು 7 ದಿನಗಳ ಕಾಲ ಒಟ್ಟು 0.60 ಟಿ.ಎಂ.ಸಿ ನೀರನ್ನು ಬಿಡಲಾಗಿರುತ್ತದೆ. ನದಿ ಪಾತ್ರದ ಜನರು ಸುರಕ್ಷತೆ ವಹಿಸಬೇಕು ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮನ್ನವರ ಹೇಳಿದರು.
ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಮಳೆ ಬಾರದೇ ನೀರಿನ ಗಂಭೀರ ಸಮಸ್ಸೆ ಉಲ್ಬಣವಾಗಿದ್ದು ನೀರನ್ನು ಜನ, ಜಾನುವಾರುಗಳಿಗಳಿಗೆ ಕುಡಿಯಲು ಮಾತ್ರ ಬಳಸಬೇಕು. ಕೃಷಿ ಉದ್ದೇಶಕ್ಕೆ ಬಳಸಬಾರದು.
ಒಂದು ವೇಳೆ ಬಳಸಲು ಆರಂಭಿಸಿದರೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ ಪಂಪ್‌ಸೆಟ್ ನೀಡಿದ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಾದ ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ, ನಾಗರಾಳ, ಎಸ್.ಪಿ.ಸಬ್ಬಲಹುಣಸಿ, ಲಾಯದಗುಂದಿ, ಕೊಟ್ನಳ್ಳಿ, ಆಸಂಗಿ, ಕಟಗಿನಹಳ್ಳಿ ಮುಂತಾದ ಹಳ್ಳಿಗಳ ಜನರು ಗುಂಪಾಗಿ ನದಿಯಲ್ಲಿ ಯಾವುದೇ ಕೆಲಸಕ್ಕೆ ಸೇರುವುದನ್ನು ನಿಷೇಧಿಸಿದೆ.
ಸಾರ್ವಜನಿಕ ಜನ ಜೀವನದ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.19 ರಿಂದ ಅ.29 ರ ವರೆಗೆ ದಂಡ ಪ್ರಕ್ರಿಯೆ ಸಹಿಂತೆ ಕಲಂ-144 ರ ಪ್ರಕಾರ ನಿಷೇದಾಜ್ಞೆ ಹೊರಡಿಸಲಾಗಿದೆ. ಈ ಆದೇಶ ಅಂತ್ಯ ಸಂಸ್ಕಾರ,ಧಾರ್ಮಿಕ ಹಾಗೂ ಚುಣಾವಣಾ ಕಾರ್ಯಗಳಿಗೆ ಅನ್ವಯಿಸುವುದಿಲ್ಲಾ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.