ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಸುಕ್ಷೇತ್ರ ಹೆಬ್ಬಳ್ಳಿಯಲ್ಲಿ ಫೆ.11ರಂದು ಬೆಳಿಗ್ಗೆ 11ಕ್ಕೆ ನೂತನವಾಗಿ ನಿರ್ಮಿಸಿದ ಗುರು ದೊಡ್ಡಲಾಲಸಾಬವಲಿ ದೇವರ ದರ್ಗಾ ಲೋಕಾರ್ಪಣೆ ನಡೆಯಲಿದೆ ಎಂದು ಹೆಬ್ಬಳ್ಳಿ ಅಜ್ಜನವರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.10ರಂದು ಎಲ್ಲ ಗುರುಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಕಳಸಾರೋಹಣ ನೆರವೇರಲಿದೆ. 11ರಂದು ಲೋಕಾರ್ಪಣೆ ಕಾರ್ಯಕ್ರಮವನ್ನು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಉದ್ಘಾಟಿಸಲಿದ್ದು, ದರ್ಗಾವನ್ನು ಶಾಸಕ ಎಚ್.ವೈ. ಮೇಟಿ ನೆರವೇರಿಸಲಿದ್ದಾರೆ’ ಎಂದರು.
‘ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಗದುಗಿನ ಶಿವಾನಂದ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ, ಕನ್ನೂರ ಹಿರೇಮಠದ ವಿಶ್ವ ರಾಜೇಂದ್ರ ಸ್ವಾಮೀಜಿ, ಮಹಾಲಿಂಗೇಶ್ವರ ಸಂಸ್ಥಾನ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ, ಹಾಗೂ ಹೊಳೆಆಲೂರು ಜಾಗೃತಿ ಭೂಮಿಯ ಯಚ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.
ಸಚಿವ ಶಿವರಾಜ ತಂಗಡಗಿ ಜ್ಯೋತಿ ಬೆಳಗಿಸಲಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮತ್ತಿತರರು ಭಾಗವಹಿಸಲಿದ್ದಾರೆ.
ಮಲ್ಲಿಕಾರ್ಜುನ ಬೆಳಗಲ್, ರವಿ ಕಲ್ಲೂರ, ಮುತ್ತು ಮುಪ್ಪಯ್ಯನವರ, ವಿನಾಯಕ ಕೆಂಚನಗುಡ್ಡ, ದೇವೇಂದ್ರಪ್ಪ ತಿಮ್ಮಣ್ಣ, ಅಮರ ಕಳ್ಳಿಗುಡ್ಡ, ಯಲ್ಲಪ್ಪ ಕ್ಯಾದ್ದಿಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.