ADVERTISEMENT

ಗುರುವಿನ ಮಾರ್ಗದರ್ಶನ ಅಗತ್ಯ: ಮಹಾದೇವ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:46 IST
Last Updated 4 ಫೆಬ್ರುವರಿ 2026, 5:46 IST
ಬನಹಟ್ಟಿಯ ಸಿದ್ದಾರೂಢ ಮಠದ ಶತಮಾನೋತ್ಸವ ಮತ್ತು ಅಕ್ಕಲಕೋಟ ರೇವಣಸಿದ್ಧೇಶ್ವರರ 164ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಬನಹಟ್ಟಿಯ ಸಿದ್ದಾರೂಢ ಮಠದ ಶತಮಾನೋತ್ಸವ ಮತ್ತು ಅಕ್ಕಲಕೋಟ ರೇವಣಸಿದ್ಧೇಶ್ವರರ 164ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಬೈಲಹೊಂಗಲದ ಮಹಾದೇವ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ರಬಕವಿ ಬನಹಟ್ಟಿ: ಧರ್ಮದ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಮತ್ತು ಗುರು ಕೃಪೆ ಅಗತ್ಯವಾಗಿದೆ ಎಂದು ಬೈಲಹೊಂಗಲದ ಮುಮುಕ್ಷ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಸೋಮವಾರ ಇಲ್ಲಿನ ಈಶ್ವರಲಿಂಗ ಮೈದಾನದ ಸಮುದಾಯ ಭವನದಲ್ಲಿ ಸಿದ್ದಾರೂಢ ಮಠದ ಶತಮಾನೋತ್ಸವ ಹಾಗೂ ಅಕ್ಕಲಕೋಟ ರೇವಣಸಿದ್ಧೇಶ್ವರ ಶರಣರ 164 ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇವಣಸಿದ್ಧೇಶ್ವರ ಶರಣರ ಪ್ರವಚನವನ್ನು ಆಲಿಸುವುದರಿಂದ ಜೀವನವು ಪಾವನವಾಗುತ್ತದೆ ಎಂದು ಹೇಳಿದರು.

ADVERTISEMENT

ಹಲಗೇರಿಯ ಶಂಕರ ಶಾಸ್ತ್ರಿಗಳು ಮಾತನಾಡಿ, ಅಧ್ಯಾತ್ಮಿಕ ಚಿಂತನೆಯ ಜೊತೆಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಮೈದರಗಿಯ ಅಭಿನವ ರೇವಣಸಿದ್ಧ ಶರಣರು ಮಾತನಾಡಿ, ಸಂಸ್ಕಾರ ಮತ್ತು ಧರ್ಮದ ಕೊರತೆ ಎಲ್ಲಿ ಇರುತ್ತದೆಯೋ ಅಲ್ಲಿ ಮಹಾತ್ಮರು ಜನ್ಮ ತಾಳುತ್ತಾರೆ. ನಿಸ್ವಾರ್ಥ ಭಾವದಿಂದ ದಾನ ಮಾಡಬೇಕು. ಸಂಸಾರದಲ್ಲಿ ಮೋಹ ಇರಬಾರದು ಧರ್ಮದ ಆಚರಣೆ ಇರಬೇಕು ಎಂದರು.

ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಶ್ರೀಶೈಲ ಶೀಲವಂತ, ಶೇಖರ ಹಕ್ಕಲದಡ್ಡಿ, ಘೂಳಪ್ಪ ಮುಳೆಗಾವಿ, ಗಂಗಾಧರ ಅಥಣಿ, ಶಿವಾನಂದ ಬುದ್ನಿ, ಶಂಕರಅಥಣಿ, ಪ್ರಭಾವತಿ ಸುಟ್ಟಟ್ಟಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.