ADVERTISEMENT

ಬಾಗಲಕೋಟೆ: ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:52 IST
Last Updated 10 ಜನವರಿ 2026, 6:52 IST
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಮುರಿದ ಸ್ಥಳದಲ್ಲಿ ಗೇಟ್ ಅಳವಡಿಸಲಾಯಿತು
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಮುರಿದ ಸ್ಥಳದಲ್ಲಿ ಗೇಟ್ ಅಳವಡಿಸಲಾಯಿತು   

ರಬಕವಿ ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 22 ನೇ ಈಚೆಗೆ ಮುರಿದಿದ್ದ ಗೇಟ್ ಅನ್ನು ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಅಳವಡಿಸಲಾಯಿತು.

ಮಂಗಳವಾರ ಮಧ್ಯಾಹ್ನ ಜಲಾಶಯದಲ್ಲಿ 5.2 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಶುಕ್ರವಾರ ಬೆಳಗಿನ ಜಾವ ಗೇಟ್ ಅಳವಡಿಸಿದ ನಂತರ ಬ್ಯಾರೇಜ್‌ನಲ್ಲಿ 3.66 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಜಲಾಶಯದಿಂದ 2.34 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ಸದ್ಯ ಕೃಷ್ಣಾ ನದಿಗೆ ಜಿಎಲ್‌ಬಿಸಿ ಕಾಲುವೆಯ ಮೂಲಕ ನೀರು ಹರಿದು ಬರುತ್ತಿದೆ ಎಂದು ಬ್ಯಾರೇಜ್‌ನ ಎಇಇ ಶಿವಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT