ADVERTISEMENT

ಇಳಕಲ್: ಪ್ರಾಮಾಣಿಕತೆ ಮೆರೆದ NWKRTC ಸಾರಿಗೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 3:09 IST
Last Updated 26 ಆಗಸ್ಟ್ 2025, 3:09 IST
ಇಳಕಲ್ ಡಿಪೊ ಬಸ್‌ನಲ್ಲಿ ಬಿಟ್ಟು ಇಳಿದಿದ್ದ ವ್ಯಾನಿಟಿ ಬ್ಯಾಗ್ ಅನ್ನು ‌ಸಾರಿಗೆ ಘಟಕ ವ್ಯವಸ್ಥಾಪಕ ಬಿರಾದಾರ ಅವರು ಸಂಬಂಧಪಟ್ಟ ಪ್ರಯಾಣಿಕರಿಗೆ ಹಿಂತಿರುಗಿಸಿದರು  
ಇಳಕಲ್ ಡಿಪೊ ಬಸ್‌ನಲ್ಲಿ ಬಿಟ್ಟು ಇಳಿದಿದ್ದ ವ್ಯಾನಿಟಿ ಬ್ಯಾಗ್ ಅನ್ನು ‌ಸಾರಿಗೆ ಘಟಕ ವ್ಯವಸ್ಥಾಪಕ ಬಿರಾದಾರ ಅವರು ಸಂಬಂಧಪಟ್ಟ ಪ್ರಯಾಣಿಕರಿಗೆ ಹಿಂತಿರುಗಿಸಿದರು     

ಇಳಕಲ್: ಮಹಿಳೆಯೊಬ್ಬರು ಬಸ್‌ನಲ್ಲಿ ಬಿಟ್ಟು ಇಳಿದಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹6 ಸಾವಿರ ನಗದು, 5 ಗ್ರಾಂ ಚಿನ್ನವನ್ನು ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಸಂಬಂಧಿಸಿದ ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಳಕಲ್‌ದಿಂದ ಹಿರೇಕೋಡಗಲಿ ಗ್ರಾಮಕ್ಕೆ ತೆರಳುತ್ತಿದ್ದ ಸುನಂದಾ ಸಿದ್ದಯ್ಯ ಮೇಲಿನಕೊಪ್ಪ ಎಂಬುವವರು ಬಸ್‌ನಲ್ಲಿಯೇ ತಮ್ಮ ವ್ಯಾನಿಟಿ ಬ್ಯಾಗ್  ಬಿಟ್ಟು ಇಳಿದಿದ್ದರು.

ಚಾಲಕ ಬಿ.ವಿ.ಪಾಟೀಲ್ ಹಾಗೂ ನಿರ್ವಾಹಕ ಮಲ್ಲಪ್ಪ ಗೋತಗಿ ಅವರು ಬ್ಯಾಗ್ ಅನ್ನು ಘಟಕ ವ್ಯವಸ್ಥಾಪಕ ಬಿರಾದಾರ ಅವರಿಗೆ ಒಪ್ಪಿಸಿದರು. ಬ್ಯಾಗ್ ಕಳೆದುಕೊಂಡಿದ್ದ ಮಹಿಳೆ ಹುಡುಕಿಕೊಂಡು ಬಂದಾಗ ಘಟಕ ವ್ಯವಸ್ಥಾಪಕರು, ಬ್ಯಾಗ್ ಅವರಿಗೆ ಸೇರಿದ್ದೆಂದು ಖಚಿತಪಡಿಸಿಕೊಂಡು ಚಾಲಕ ಹಾಗೂ ನಿರ್ವಾಹಕರ ಸಮ್ಮುಖದಲ್ಲಿ ಮಹಿಳೆಗೆ ಹಿಂದಿರುಗಿಸಿದರು.

ADVERTISEMENT

ಚಾಲಕ ಪಾಟೀಲ ಹಾಗೂ ನಿರ್ವಾಹಕ ಗೋತಗಿ ಅವರ ಪ್ರಾಮಾಣಿಕತೆಗೆ ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಭಂದಿ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.