ADVERTISEMENT

ಹುನಗುಂದ: ಆತಂಕ ಸೃಷ್ಟಿಸಿದ ಸರಣಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:32 IST
Last Updated 13 ಡಿಸೆಂಬರ್ 2025, 4:32 IST
ಹುನಗುಂದದಲ್ಲಿ ಕಳ್ಳತನ ನಡೆದ ಮನೆಯಲ್ಲಿ ಶ್ವಾನದಳವು ಪರಿಶೀಲನೆ ನಡೆಸಿತು
ಹುನಗುಂದದಲ್ಲಿ ಕಳ್ಳತನ ನಡೆದ ಮನೆಯಲ್ಲಿ ಶ್ವಾನದಳವು ಪರಿಶೀಲನೆ ನಡೆಸಿತು   

ಹುನಗುಂದ: ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ಪೊಲೀಸರ ಮನೆಗಳೂ ಸೇರಿದಂತೆ ಒಟ್ಟು ಏಳು ಮನೆ ಹಾಗೂ ದೇವಸ್ಥಾನದಲ್ಲಿ ಸರಣಿ ಕಳ್ಳತನ ನಡೆದಿದೆ.  

ಒಂದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದೆ. ಮೂವರು ಪುರುಷರು ಹಾಗೂ ಮಹಿಳೆಯೊಬ್ಬರು ಮುಸುಕು ಧರಿಸಿ ಓಡಾಡಿದ ದೃಶ್ಯವಿದೆ.

ಅಜಾದ್ ನಗರದಲ್ಲಿನ ಮೂರು, ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ಎರಡು ಮನೆ, ಪೊಲೀಸ್ ಠಾಣೆ ಹತ್ತಿರದ ಎರಡು ಮನೆಗಳು ಹಾಗೂ ಅಂಬೇಡ್ಕರ್ ನಗರದಲ್ಲಿನ ಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಮನೆಗಳು ಹಾಗೂ ದೇವಸ್ಥಾನದಲ್ಲಿ ಏನೆಲ್ಲ ಕಳವಾಗಿದೆ ಎಂಬುದನ್ನು ಪೊಲೀಸರು ಖಚಿತಪಡಿಸಲಿಲ್ಲ. ಘಟನಾ ಸ್ಥಳಗಳಿಗೆ ಶ್ವಾನದಳ ಹಾಗೂ ಬೆರಳೆಚ್ಚು ತಜ್ಞರು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.