ADVERTISEMENT

ಹುನಗುಂದ | ಸಂಬಂಧಗಳ ಗಟ್ಟಿಗೊಳಿಸುವ ಹಬ್ಬಗಳು: ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:34 IST
Last Updated 21 ಅಕ್ಟೋಬರ್ 2025, 2:34 IST
ಹುನಗುಂದದಲ್ಲಿ ದೀಪಾವಳಿ ಅಂಗವಾಗಿ ಬಿಜೆಪಿ ಯುವ ಮುಖಂಡ ಬಸವರಾಜ ಹೊಸೂರ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಾರ್ವಜನಿಕರಿಗೆ ಸಿಹಿ ವಿತರಿಸಿದರು
ಹುನಗುಂದದಲ್ಲಿ ದೀಪಾವಳಿ ಅಂಗವಾಗಿ ಬಿಜೆಪಿ ಯುವ ಮುಖಂಡ ಬಸವರಾಜ ಹೊಸೂರ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಾರ್ವಜನಿಕರಿಗೆ ಸಿಹಿ ವಿತರಿಸಿದರು   

ಹುನಗುಂದ: ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದು. ಎಲ್ಲ ಧರ್ಮೀಯರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ಪರಸ್ಪರರಲ್ಲಿ ವಿಶ್ವಾಸ, ಆತ್ಮಿಯತೆ, ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ದೀಪಾವಳಿ ಅಂಗವಾಗಿ ಸೋಮವಾರ ಬಿಜೆಪಿ ಯುವ ಮುಖಂಡ ಬಸವರಾಜ ಹೊಸೂರ ಪಟ್ಟಣದ ವಾರ್ಡ್‌ ನಂ. 19ರಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಆಗಿರುವ ಕಹಿ ಘಟನೆಗಳನ್ನು ಮರೆತು ಹೊಸ ಹೊಸ ಆಲೋಚನೆ, ಚೈತನ್ಯದೊಂದಿಗೆ ಮುನ್ನಡೆಯುವುದೇ ದೀಪಾವಳಿ ಹಬ್ಬದ ಉದ್ದೇಶ. ಮುಖಂಡ ಬಸವರಾಜ ಹೊಸೂರ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.

ADVERTISEMENT

ಮುಖಂಡರಾದ ರಾಜಕುಮಾರ ಬಾದವಾಡಗಿ, ರಾಜು ನಾಡಗೌಡ, ಮಹೇಶ ಬೆಳ್ಳಿಹಾಳ ಮತನಾಡಿದರು. ಬಸವರಾಜ ಹೊಸೂರ, ಅಶೋಕ ಬಂಡರಗಲ್ಲ, ಅಜ್ಜಪ್ಪ ನಾಡಗೌಡ, ಸಂಗಣ್ಣ ಚಿನಿವಾಲರ, ಅಪ್ಪು ಆಲೂರ, ವಿರೇಶ ಬಂಡಿ, ಸಂಗಣ್ಣ ಹೊಸೂರ, ಮಲ್ಲು ಚೂರಿ ಇದ್ದರು.