ADVERTISEMENT

ವಿಪಕ್ಷಗಳ ಅಪಪ್ರಚಾರಕ್ಕೆ ಅಭಿವೃದ್ಧಿ ಮೂಲಕ ಉತ್ತರ: ಶಾಸಕ ಎಚ್.ವೈ.ಮೇಟಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:23 IST
Last Updated 21 ಜುಲೈ 2025, 4:23 IST
ಶಾಸಕ ಎಚ್.ವೈ.ಮೇಟಿ ಭಾನುವಾರ ಅಚನೂರ ಕ್ರಾಸ್-ಆಲಮಟ್ಟಿ ಡ್ಯಾಮ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಎಚ್.ವೈ.ಮೇಟಿ ಭಾನುವಾರ ಅಚನೂರ ಕ್ರಾಸ್-ಆಲಮಟ್ಟಿ ಡ್ಯಾಮ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.   

ರಾಂಪುರ: ‘ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ವಿಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡಲಿದೆ’ ಎಂದು ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಹೇಳಿದರು.

ಎನ್.ಎಚ್ 367 ರ ಬಾಗಲಕೋಟೆ-ಆಲಮಟ್ಟಿ ರಸ್ತೆಯಲ್ಲಿ ಅಚನೂರ ಕ್ರಾಸ್ ನಿಂದ ಆಲಮಟ್ಟಿ ಡ್ಯಾಮ್(ತಾಲ್ಲೂಕಿನ ಬಾರ್ಡರ್)ವರೆಗಿನ 16.15 ಕಿ.ಮೀ ರಸ್ತೆ ಅಭಿವೃದ್ಧಿಗೊಳಿಸುವ 27.70 ಕೋಟಿ ರೂ.ಗಳ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಹಳ ದಿನಗಳಿಂದ ಆಲಮಟ್ಟಿ ರಸ್ತೆ ಹಾಳಾಗಿ ಪ್ರಯಾಣಿಕರು, ವಾಹನ ಸವಾರರಿಗೆ ತೊಂದರೆಯಾಗಿತ್ತು. ಈಗ ಕಾಮಗಾರಿ ಪ್ರಾರಂಭವಾಗುತ್ತದೆ ಎಂದ ಶಾಸಕರು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ADVERTISEMENT

ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯ(ವಿಭಾಗ-4) ಕಾರ್ಯಪಾಲಕ ಎಂಜಿನಿಯರ್ ಸುರೇಶ ಹಳ್ಳಿ ಮಾತನಾಡಿ, ಅಚನೂರ ಕ್ರಾಸ್ ನಿಂದ ನಡೆಯಲಿರುವ ರಸ್ತೆ ಕಾಮಗಾರಿ ಸಂದರ್ಭದಲ್ಲಿ 5 ಮೀಟರ್ ರಸ್ತೆಯನ್ನು 7 ಮೀಟರಿಗೆ ಅಗಲೀಕರಣಗೊಳಿಸಲಾಗುವುದು. ಇದಕ್ಕೆ ಸಾರ್ವಜನಿಕರು ಮತ್ತು ಸ್ಥಳೀಯ ಮುಖಂಡರ ಸಹಕಾರ ಅಗತ್ಯ ಎಂದು ಹೇಳಿದರು.

ಮುಖಂಡರಾದ ಉಮೇಶ ಮೇಟಿ, ರಮೇಶ ಆಕಳವಾಡಿ, ಮಲ್ಲಿಕಾರ್ಜುನ ಮೇಟಿ, ಎಸ್.ಎನ್.ರಾಂಪುರ, ಬಾಲಪ್ಪ ಗಣಿ, ನಾರಾಯಣ ಶಿಲ್ಪಿ, ಜಟ್ಟೆಪ್ಪ ಮಾದಾಪುರ, ಫಕೀರಪ್ಪ ಕೊಣ್ಣೂರ, ಮಲ್ಲು ದ್ಯಾವಣ್ಣವರ, ಶ್ರೀಕರ ದೇಸಾಯಿ, ರಮೆಶ ಕೊಳ್ಳಾರ, ಶರಣಪ್ಪ ಮಾಗನೂರ, ವೈ.ವೈ.ತಿಮ್ಮಾಪೂರ, ಸಿ.ಎನ್.ಬಾಳಕ್ಕನವರ, ನಿಂಗಣ್ಣ ಯಡಹಳ್ಳಿ ಬಸವರಾಜ ಕೆಂಜೋಡಿ, ಕೆಬಿಜೆಎನ್ ಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಎಸ್.ಐ.ಶಿರೂರ, ಗುತ್ತಿಗೆದಾರ ಶಿವಾನಂದ ನಾಯಕ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.