ADVERTISEMENT

ಬಾಗಲಕೋಟೆ | ಕಾರ್ಯಕರ್ತರಲ್ಲಿ ಗೊಂದಲ ಬೇಡ: ಮೇಟಿ ಸಹೋದರರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:28 IST
Last Updated 6 ಜನವರಿ 2026, 7:28 IST
ಎಚ್‌.ವೈ. ಮೇಟಿ
ಎಚ್‌.ವೈ. ಮೇಟಿ   

ಬಾಗಲಕೋಟೆ: ‘ನಮ್ಮ ತಂದೆ ಎಚ್‌.ವೈ. ಮೇಟಿ ಅವರ ನಿಧನದ ನೋವಿನಲ್ಲಿ ಇಡೀ ಕುಟುಂಬ ಹಾಗೂ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು, ಪ್ರಮುಖರು ಇದ್ದೇವೆ. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಎಂಬ ವಿಚಾರ ಮಾಡಿಲ್ಲ. ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಮೇಟಿ ಕುಟುಂಬ ಬದ್ಧವಾಗಿದೆ. ಕಾರ್ಯಕರ್ತರು ಗೊಂದಲ ಮಾಡಿಕೊಳ್ಳುವುದು ಬೇಡ’ ಎಂದು ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಅವರು, ‘ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಲಾಷೆ, ಪಕ್ಷದ ಹೈಕಮಾಂಡ್‌ ನಿರ್ಧಾರವೇ ಅಂತಿಮ. ಅವರೆಲ್ಲರ ನಿರ್ಧಾರದಂತೆ ಇಡೀ ಮೇಟಿ ಕುಟುಂಬ ನಡೆದುಕೊಳ್ಳುತ್ತದೆ’ ಎಂದಿದ್ದಾರೆ.

‘ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ ಅಥವಾ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರೂ ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳಬಾರದು. ತಂದೆಯವರ ಅಕಾಲಿಕ ನಿಧನದಿಂದ ತೀವ್ರ ದುಃಖದಲ್ಲಿದ್ದೇವೆ. ಅವರು ಅರ್ಧಕ್ಕೆ ಬಿಟ್ಟು ಹೋದ ಪ್ರತಿಯೊಂದು ಕೆಲಸವನ್ನು ನಾವು ಒಟ್ಟಾಗಿ ಮುಂದುವರೆಸುತ್ತೇವೆ. ಈ ವಿಷಯದಲ್ಲಿ ಕಾರ್ಯಕರ್ತರು, ಮುಖಂಡರು, ತಂದೆಯವರಿಗೆ ನೀಡುತ್ತಿದ್ದ ಆಶೀರ್ವಾದ, ಬೆಂಬಲ ನಮಗೂ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.