
ಕೆರೂರ: ‘ಜೀವನದಲ್ಲಿ ಸರಳ ನಿರರ್ಗಳವಾಗಿ ತ್ರಿಭಾಷೆಗಳ ಮೇಲೆ ಹಿಡಿತ ಸಾಧಿಸಿದರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಬೆಳಗಾವಿ ಸಹ ನಿರ್ದೇಶಕ ವಾಲ್ಟರ್ ಎಚ್ ಡಿಮೊಲೋ ಹೇಳಿದರು.
ಅವರು ನೀರಬೂದಿಹಾಳ,ಕೆರಲಮಟ್ಟಿ,ಕೆರೂರ ಪ್ರೌಢ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಸಂವಾದ ನಡಿಸಿ ಮಕ್ಕಳ ಭವಿಷ್ಯದ ಬದುಕು ಕಟ್ಟಿಕೊಳ್ಳುವ ಬಗೆ ಕುರಿತು ತ್ರಿಭಾಷೆಗಳ ಕುರಿತು ವಿಸ್ತೃತ ಸಂವಾದ ನಡೆಸಿ ಮನ ಮುಟ್ಟುವಂತೆ ಭೋದನೆ ಮಾಡಿದರು.
ಜೀವನದಲ್ಲಿ ಬದುಕುವ ಮಾರ್ಗಕಂಡುಕೊಳ್ಳಲು ಆಂಗ್ಲ,ಕನ್ನಡ,ಹಿದಿ ಭಾಷೆಗಳ ಕಲಿಕೆ ಇಂದಿನ ದಿನಮಾನಗಳಲ್ಲಿ ಅನಿವಾರ್ಯವಾಗಿದೆ.ತ್ರಿಭಾಷಾ ಕಲಿಕೆಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಜೀವನ ಸಾಗಿಸಬಹುದು ಎಂದರು.
ವಿದ್ಯಾರ್ಥಿ ಕಲಿಕಾ ವೇಳೆಯಲ್ಲಿ ಪ್ರತಿನಿತ್ಯ ದಿನಚರಿ ರೂಡಿಸಿಕೊಂಡು ತಪ್ಪದೇ ಪಾಲಿಸಿದರೆ ಉತ್ತಮ ಅಂಕ ಗಳಿಕೆ ಜೊತೆಗೆ ಉತ್ತಮ ಸಂಸ್ಕೃತಿ ಹೊಂದಲು ಸಾಧ್ಯ ಇಂದಿನ ದಿನಗಳಲ್ಲಿ ಬಾಹ್ಯ ಪ್ರಪಂಚದಲ್ಲಿ ದಿನನಿತ್ಯ ಆಗು-ಹೋಗುಗಳ ಸಮಗ್ರ ಅರವಳಿಕೆ ಮೇಲೆ ನಿಗಾ ಇಟ್ಟರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮೇಲಕ್ಕೇರಲು ಹತ್ತನೇ ತರಗತಿ ಮೇಟ್ಟಲು
ವಿದ್ಯಾರ್ಥಿಗಳು ಜೀವನದಲ್ಲಿ ಮೇಲಕ್ಕೇರಲು ಹತ್ತನೇ ತರಗತಿ ಭದ್ರ ಬುನಾದಿ ಈ ವರ್ಷದಲ್ಲಿ ಬೇಕಾಬಿಟ್ಟಿ ಕಾಲ ಹರಣ ಮಾಡಿದರೆ ಭವಿಷ್ಯದ ಬದುಕು ಎಡವಟ್ಟು ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ಮಾರ್ಮಿಕವಾಗಿ ಡಿಮೊಲೋ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ ಕುಂದರಗಿ,ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ ದೊಡ್ಡಪ್ಪನವರ, ಸಂಯೋಜಕ ಹಣಮಂತರಾಜು,ಎA.ಎ. ಹದ್ಲಿ,ಮುಖ್ಯಗುರುಗಳಾದ ಸಿ.ಎಸ್ ನಾಗನೂರ, ನಾಗರಾಜ ದೇಶಪಾಂಡೆ,ಬಿಎಚ್ ನಧಾಫ್,ಎಸ್.ಎಂ ನಧಾಫ್,ಜೆ.ಎಚ್ ಬಾರಕೇರ, ಎಸ್.ಎಂ ಜುಮ್ಮನ್ನವರ,ಈ ಸಂದರ್ಭದಲ್ಲಿ ಮೂರು ಶಾಲೆಗಳ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.