
ಜಮಖಂಡಿ: ಇಂದಿನ ದಿನಮಾನಗಳಲ್ಲಿ ಮನುಷ್ಯನಿಗೆ ಯಾವಾಗ ಏನಾಗುತ್ತದೆ ಗೊತ್ತಾಗುವುದಿಲ್ಲ, ದುಡಿಯುವ ಮನೆ ಯಜಮಾನನಿಗೆ ಅನಾಹುತಗಾಳಾದರೆ ಅವನ ನಂಬಿದ ಕುಟುಂಬ ಬೀದಿಗೆ ಬರುತ್ತದೆ. ಅಂತಹ ಕೆಟ್ಟ ಸಮಯದಲ್ಲಿ ವಿಮೆಗಳು ಜೀವನ ನಡೆಸಲು ಬಹಳಷ್ಟು ಸಹಕಾರಿಯಾಗಿವೆ.ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ದುಡಿಮೆಯಲ್ಲಿನ ಹಣ ಉಳಿಸಿ ವಿಮೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಸಾಕ್ಷಾತ್ಕಾರ ನಿವಾಸದಲ್ಲಿ ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ವಿಮಾ ಕಂಪನಿಗಳ ಜೊತೆ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ದುಡಿಯುವವರು, ಉದ್ಯಮಿಗಳು, ಮನೆಗೆ ಆಧಾರ ಸ್ಥಂಭವಾಗಿರುವವರು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಇನ್ಸೂರೆನ್ಸ್ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರಭುಲಿಂಗೇಶ್ವರ ಬ್ಯಾಂಕ್ 15 ಶಾಖೆಗಳನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ರಾಜ್ಯಾದಾದ್ಯಂತ ಶಾಖೆ ತೆರೆಯುವ ಗುರಿ ಹಾಕಿಕೊಂಡಿದ್ದೆವೆ. ಬ್ಯಾಂಕಿನಿಂದ 800ಕ್ಕೂ ಅಧಿಕ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಹಿರಿಯ ವಯಸ್ಕ ಗ್ರಾಹಕರಿಗೆ ತಮ್ಮ ಮನೆಗಳಿಗೆ ತೆರಳಿ ಬ್ಯಾಂಕಿನ ಸಿಬ್ಬಂದಿಗಳು ಸೇವೆ ನೀಡುತ್ತಿದ್ದಾರೆ. ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಯೋಜನೆಗಳು ಹಾಕಿಕೊಂಡಿದ್ದೆವೆ. ವ್ಯಾಪಾರ ವಹಿವಾಟಿಗೆ ತುರ್ತು ಸಾಲ ಯೋಜನೆ ಹಾಕಿಕೊಂಡಿದ್ದೆವೆ ಎಂದರು.
ಎಲ್‌ಐಸಿ ಮ್ಯಾನೇಜರ್ ವಿವೇಕಾನಂದ ಎಲ್.ಎಚ್, ರಿಲಯನ್ಸ್ ನಿಪ್ಪೊನ ಲೈಪ್ ಇನ್ಸೂರೆನ್ಸನ ವೈಭವ ಉಜ್ಜಿನಕೊಪ್ಪ, ಇಪ್ಕೋ ಟೋಕಿಯೊದ ಹೊಳಬಸಪ್ಪ ಕಲ್ಯಾಣಿ, ನ್ಯೂ ಇಂಡಿಯಾ ಇನ್ಸೂರೆನ್ಸನ ಕೌಶಿಕ್, ದಿ ಒರಿಯಂಟಲ್ ಬ್ಯೂಸಿನೆಸ್ ಮ್ಯಾನೇಜರ್ ಶಂಕರ ಪೂಜಾರಿ, ವಿವೇಕಾನಂದ ಚೌಗಲಾ, ನೇಮಣ್ಣ ಜಮಖಂಡಿ, ನಾಗಪ್ಪ ಸನದಿ, ದೇವಲ ದೇಸಾಯಿಇದ್ದರು. ಪ್ರಧಾನ ವ್ಯವಸ್ಥಾಪಕ ಮಹೇಶ ಮಠಪತಿ ಸ್ವಾಗತಿಸಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.