ADVERTISEMENT

ಕೆಟ್ಟದರ ಮೇಲೆ ಒಳ್ಳೆಯದರ ಜಯ ಸಾರುವ ಹೋಳಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:03 IST
Last Updated 4 ಮಾರ್ಚ್ 2026, 5:03 IST
ಜಮಖಂಡಿಯ ಹೊಕ್ಕಳಬಾವಿ ಮೈದಾನದಲ್ಲಿ ಮಂಗಳವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಲಗೆ ಮೇಳಕ್ಕೆ ಚಾಲನೆ ನೀಡಿದರು
ಜಮಖಂಡಿಯ ಹೊಕ್ಕಳಬಾವಿ ಮೈದಾನದಲ್ಲಿ ಮಂಗಳವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಲಗೆ ಮೇಳಕ್ಕೆ ಚಾಲನೆ ನೀಡಿದರು   

ಜಮಖಂಡಿ: ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಮತ್ತು ಆಧ್ಯಾತ್ಮಿಕ ಹಬ್ಬ, ಕೆಟ್ಟದರ ಮೇಲೆ ಒಳ್ಳೆಯದರ ಜಯವನ್ನು ಸಾರುವ ಹಬ್ಬವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಇಲ್ಲಿನ ಹೊಕ್ಕಳಬಾವಿ ಮೈದಾನದಲ್ಲಿ ಮಂಗಳವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಲಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಹೋಳಿ ಹುಣ್ಣಿಮೆ ಕೇವಲ ಬಣ್ಣಗಳ ಹಬ್ಬವಲ್ಲ. ಅದು ಧರ್ಮದ ಜಯ, ಭಕ್ತಿಯ ಶಕ್ತಿ ಮತ್ತು ದುಷ್ಟತನದ ನಾಶದ ಸಂಕೇತವಾಗಿದೆ ಎಂದರು.

ವಿವಿಧ ಮಠಾಧೀಶರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ, ಓಲೇಮಠ, ಶ್ರೀರಾಮ ಮಂದಿರ, ಹನುಮಾನ ದೇವಸ್ಥಾನದ ಆವರಣದಲ್ಲಿ ಕಾಮದಹನ ಮಾಡಲಾಯಿತು.

ADVERTISEMENT

ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀ, ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಕೃಷ್ಣಾನಂದ ಅವಧೂತರು, ಕೊಣ್ಣೂರ ವಿಶ್ವಪ್ರಭುದೇವ ಶ್ರೀಗಳು, ಮಾದುಲಿಂಗ ಮಹಾರಾಜರು, ಅಜಯ ಕಡಪಟ್ಟಿ, ರಾಹುಲ ಕಲೂತಿ, ಯಮನೂರ ಮೂಲಂಗಿ, ವಿಠ್ಠಲ ಪರೀಟ್, ಪ್ರಭು ಜನವಾಡ, ಗಣೇಶ ಶಿರಗಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.