ರಬಕವಿ ಬನಹಟ್ಟಿ: ಸ್ಥಳೀಯ ಕಾಡಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ರಥೋತ್ಸವವು ಸರಳವಾಗಿ ನೆರವೇರಿತು.
ಕೋವಿಡ್ ಪರಿಣಾಮ ಕೇವಲ ಐದು ಅಡಿ ವರೆಗೆ ಮಾತ್ರ ತೇರನ್ನು ಎಳೆಯಲಾಯಿತು. ಪ್ರತಿವರ್ಷ ಮಂಗಳವಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತ್ತು. ಈ ಬಾರಿ ಅಂಥ ಜನಜಂಗುಳಿ ಕಾಣಲಿಲ್ಲ. ಕೆಲವೇ ಭಕ್ತರು ರಥವನ್ನು ಕೇವಲ ಐದು ಅಡಿ ವರೆಗೆ ಮಾತ್ರ ಎಳೆದ ಸಂಪ್ರದಾಯ ಪಾಲಿಸಿದರು.
ಕಾಡಸಿದ್ಧೇಶ್ವರರ ಬೆಳ್ಳಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿ ಸಲಾಗಿತ್ತು. 150 ವರ್ಷ ಪುರಾತನ ರಥವನ್ನು ದೀಪಗಳು ಮತ್ತು ಬೃಹತ್ ಪ್ರಮಾಣದ ಹೂವಿನ ಮಾಲೆಗಳಿಂದ ಶೃಂಗರಿಸಲಾಗಿತ್ತು.
ಮೊದಲ ಬಾರಿಗೆ ಮದ್ದು ಸುಡದೆ ರಥೋತ್ಸವ ಕಾಡಸಿದ್ಧೇಶ್ವರ ಜಾತ್ರೆಯು ನಡೆಯಿತು.
ಕೈಮಗ್ಗ ಅಭಿವೃದ್ಧಿ ನಿಮಗದ ಅಧ್ಯಕ್ಷ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ ದೇವರ ದರ್ಶನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.