ADVERTISEMENT

ನಾನು ಸಿಎಂ ಆಗಲು ಇನ್ನೂ 15 ವರ್ಷ ಅವಕಾಶವಿದೆ: ಸಚಿವ ಉಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:13 IST
Last Updated 6 ಆಗಸ್ಟ್ 2021, 11:13 IST
ಉಮೇಶ ಕತ್ತಿ
ಉಮೇಶ ಕತ್ತಿ    

ಬಾಗಲಕೋಟೆ: ಇನ್ನೂ 15 ವರ್ಷ ಬಿಜೆಪಿಯಲ್ಲಿ ನನ್ನ ಆಯುಷ್ಯ ಇದೆ. ನನ್ನ ಪ್ರಕಾರ 80 ವರ್ಷದ ತನಕ ಪಕ್ಷದಲ್ಲಿ ಇರಬೇಕಿದೆ. ಹೀಗಾಗಿ ಸಿಎಂ ಆಗುವ ಆಸೆ ಇನ್ನೂ ಕಮರಿಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಕತ್ತಿ ಮೇಲಿನಂತೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ಆದರೆ ಅದಿನ್ನೂ ನನ್ನ ನಸೀಬಿಗೆ (ಅದೃಷ್ಟ) ಕೂಡಿ ಬಂದಿಲ್ಲ ಎಂದು ಹೇಳಿದ ಅವರು, ಉತ್ತರ ಕನಾ೯ಟಕದ ಅಭಿವೃದ್ಧಿ ಜೊತೆಗೆ ರಾಜಕೀಯದಲ್ಲಿ ಮುಂದುವರೆಯಬೇಕೆನ್ನೋದು ನನ್ನ ಛಲ ಎಂದ ಹೇಳಿದರು.

ADVERTISEMENT

ಖಾತೆ ಹಂಚಿಕೆ ರಾಜ್ಯದ ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟಿದ್ದು. ಯಾವ ಯಾವ ಖಾತೆಗಳನ್ನು ಯಾವಾಗ ಕೊಡ್ತಾರೋ ಅದನ್ನು ನಿವ೯ಹಿಸುತ್ತೇವೆ. ಯಾವುದೇ ಖಾತೆ ಕೊಟ್ಡರೂ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಉದ್ದೇಶ ಎಂದರು.

‘ನಿರ್ದಿಷ್ಟ ಖಾತೆಗಾಗಿ ನಾನು ಸಿಎಂಗಾಗಲಿ, ಹೈಕಮಾಂಡ್ ಗಾಗಲಿ ಬೇಡಿಕೆ ಇಟ್ಟಿಲ್ಲ. ಜನ ಬಯಸುವ ಖಾತೆ ನೀಡಲಿ, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ’ ಎಂದು ಕತ್ತಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.