ADVERTISEMENT

ಕೂಡಲಸಂಗಮ | ಜನರಲ್ಲಿ ಭೀತಿ ಹುಟ್ಟಿಸಿದ ಕೋತಿ!

ಮಂಗಗಳ ಕಾಟಕ್ಕೆ ಸುಸ್ತಾದ ಕೂಡಲಸಂಗಮ ಪುನರ್ ವಸತಿ ಕೇಂದ್ರದ ನಿವಾಸಿಗಳು

ಶ್ರೀಧರ ಗೌಡರ
Published 16 ಜೂನ್ 2025, 6:18 IST
Last Updated 16 ಜೂನ್ 2025, 6:18 IST
ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ಕೋತಿಗಳು ಉಪಟಳ 
ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ಕೋತಿಗಳು ಉಪಟಳ    

ಕೂಡಲಸಂಗಮ: ಕೂಡಲಸಂಗಮ ಪುನರ್ ವಸತಿ ಕೇಂದ್ರದ ನಿವಾಸಿಗಳು ಮಂಗಗಳ ಕಾಟಕ್ಕೆ ಸುಸ್ತಾಗಿದ್ದಾರೆ. 15 ರಿಂದ 20 ಮಂಗಗಳು ಕಳೆದ ಹಲವು ದಿನಗಳಿಂದ ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ವಾಸ ಇದ್ದು, ಮಹಿಳೆಯರು, ಮಕ್ಕಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಏನಾದರು ವಸ್ತುಗಳನ್ನು ತರಲು ಮಕ್ಕಳನ್ನು ಅಂಗಡಿಗೆ ಕಳುಹಿಸಲು ಇಲ್ಲಿಯ ನಿವಾಸಿಗಳು ಭಯ ಭೀತರಾಗಿದ್ದಾರೆ. ಮಂಗಗಳ ಗುಂಪು ಮನೆಯ ಆವರಣದಲ್ಲಿಯ ದವಸ ಧಾನ್ಯಗಳನ್ನು ತಿಂದುಹಾಕುವ ಜೊತೆಗೆ ಮನೆ ಮುಂದಿನ ಗಿಡಗಳ ಕುಂಡಾಲಿಗಳನ್ನು ನಾಶ ಮಾಡುತ್ತಿವೆ. ಮನೆಯ ಸಿಂಟೆಕ್ಸ್‌ಗಳನ್ನು ಹಾಳು ಮಾಡುತ್ತಿವೆ.

ಮಂಗಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ಪುನರ್ ವಸತಿ ಕೇಂದ್ರದ ನಿವಾಸಿಗಳು ಹೇಳಿದರು.

ADVERTISEMENT

ಪುನರ್ ವಸತಿ ಕೇಂದ್ರದಲ್ಲಿ ಶಾಲೆಗಳು ಇದ್ದು ಮಕ್ಕಳು ಕೂಡಾ ಸಂಚರಿಸಲು ಭಯ ಭೀತರಾಗಿದ್ದಾರೆ. ಇಲ್ಲಿಯವರೆಗೂ ಗಿಡ, ವಸ್ತುಗಳನ್ನು ಹಾಳುಮಾಡಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಜನರು ಭೀತಿಯಿಂದ ಓಡಾಡುವಂತಾಗಿದೆ.

‘ಕಳೆದ ಎರಡು ವರ್ಷಗಳಿಂದ ಮಂಗಗಳ ಗುಂಪು ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ನೆಲೆಸಿದ್ದು, ಇಲ್ಲಿಯ ಸಸ್ಯ ಸಂಪತ್ತನ್ನು ಸಂಪೂರ್ಣ ಹಾಳು ಮಾಡಿವೆ. ಗಿಡಗಳು ಬೆಳೆಯುವಂತೆ ಮಾಡುತ್ತಿಲ್ಲ. ಮನೆ ಮೇಲಿನ, ಆವರಣದ ವಸ್ತುಗಳಿಗೆ ಅಪಾರ ಹಾನಿ ಮಾಡುತ್ತಿವೆ. ಮಂಗ ಹಿಡಿಯುವ ತಂಡ ಕರೆಯಿಸಿ, ತೆರವುಗೊಳಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಬೇಕು’ ಎಂದು ಪುನರ್ ವಸತಿ ಕೇಂದ್ರ ನಿವಾಸಿ ಸಿದ್ದು ಹಡಪದ ಹೇಳಿದರು.

ಕೂಡಲಸಂಗಮ ಪುನರ್ ವಸತಿ ಕೇಂದ್ರದಲ್ಲಿ ವಾಸ ಇರುವ ಮಂಗಗಳ ಗುಂಪನ್ನು ಕೂಡಲೆ ಸ್ಥಳಾಂತರ ಮಾಡಿಸಿ ಮುಂದೆ ಆಗಬಹುದಾದ ಅಪಾಯ ತಡೆಯಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಬೇಕು

-ಸಿದ್ದು ಹಡಪದ ಪಟ್ಟಣದ ನಿವಾಸಿ

ಸಮಸ್ಯೆ ಈಗಷ್ಟೆ ಗಮನಕ್ಕೆ ಬಂದಿದೆ. ಕೂಡಲೇ ಪರಿಣಿತರ ತಂಡ ಕರೆಸಿಕೊಂಡು ಮಂಗಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಯೋಜಿಸಲಾಗುವುದು

-ಎಚ್.ಎ.ವಕ್ರ ಪ್ರಭಾರಿ ಪಿಡಿಓ ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.