ಜಮಖಂಡಿ: ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನಿಂದ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತೊಂದರೆಯಾಗಿದ್ದು, ಹಲವು ರಸ್ತೆಗಳು ಜಲಾವೃತವಾಗಿ ಸಂಚಾರ ಸ್ಥಗಿತವಾಗಿದೆ.
ಹಿಪ್ಪರಗಿಯಿಂದ ಬಿದರಿಯವರೆಗಿನ ನದಿ ಪಕ್ಕದ 21ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ತಾಲ್ಲೂಕಿನ ಜಂಬಗಿ ಕ್ರಾಸ್‌ನಿಂದ ಟಕ್ಕೋಡ ರಸ್ತೆ, ಜಮಖಂಡಿ-ಕಡಕೋಳ ರಸ್ತೆ, ಹಿರೇಪಡಸಲಗಿ-ನಾಗನೂರ ರಸ್ತೆ, ತುಬಚಿ-ಝಂಜರವಾಡ ರಸ್ತೆ, ಕೆಡಿ ಜಂಬಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇರಿದಂತೆ ಹಲವು ರಸ್ತೆಗಳು ಜಲಾವೃತವಾಗಿವೆ.
ನದಿ ಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿರುರುವುದರಿಂದ ಹಲವು ಜಾನುವಾರುಗಳಿಗೆ ಮೇವಿನ ತೊಂದರೆಯಾಗಿದ್ದು, ಮೇವಿಗಾಗಿ ಪರದಾಡುವಂತಾಗಿದೆ, ಬೇರೆ ಕಡೆ ಹೋಗಿ ತರಲು ಜಿಟಿ ಜಿಟಿ ಮಳೆ ಅಡ್ಡಿಯಾಗುತ್ತಿದೆ.
ಅಧಿಕಾರಿಗಳು ಭೇಟಿ: ಪ್ರವಾಹ ಪೀಡಿತ ಮುತ್ತೂರ, ಶೂರ್ಪಾಲಿ, ತುಬಚಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಅನೀಲ ಬಡಿಗೇರ ಸೇರಿದಂತೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿ ಸುರಕ್ಷಿತವಾಗಿ ಇರಲು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ತಿಳಿಸಿದ್ದಾರೆ.
ತಾಲ್ಲೂಕಿನ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಮಳೆಯಿಂದ ಸುಂದ್ರವ್ವ ಗೋಪಾಲ ಗಸ್ತಿ ಇವರ ಮನೆಯ ಚಾವಣಿ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ, ನೋಡಲ್ ಅಧಿಕಾರಿಗಳ ಜೊತೆಗೆ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ
ಪ್ರವಾಹ ಪರಿಸ್ಥಿತಿ ಎದುರಿಸಲು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
ಕಂಕಣವಾಡಿ (ಕಿರಣ ದಾಸರಡ್ಡಿ ಮೊ: 9535167184)
ಕಡಕೋಳ(ವಿಕ್ರಮ ಪಟವೇಕರ 9902527719)
ಮುತ್ತೂರ(ಜೆ.ಸಿ.ಸವದಿ 9742451528)
ಮೈಗೂರ( ಪ್ರಕಾಶ ಭಜಂತ್ರಿ 9886820761)
ಜಂಬಗಿ ಬಿ.ಕೆ(ಶಂಕರ ಬಂಡಿವಡ್ಡರ 9481418686)
ಜಂಬಗಿ ಕೆ.ಡಿ(ಸಂತೋಷ ಬಾಡಗಿ 8792214288)
ಟಕ್ಕೋಡ(ಜಗದೀಶ ನಾಯ್ಕ 8073253404)
ಶೂರ್ಪಾಲಿ(ಜಗದೇವ ಪಾಸೋಡಿ 9945106364)
ತುಬಚಿ(ಶಿವಪುತ್ರಪ್ಪ ಸಜ್ಜನ 9008303780)
ಶಿರಗುಪ್ಪಿ(ರಾಮಲಿಂಗಪ್ಪ ಬೈರವಾಡಗಿ 9945550566)
ಟಕ್ಕಳಕಿ(ಎ.ಕೆ.ಬಸಣ್ಣವರ 9480019061)
ಸನಾಳ(ಎಸ್.ಸಿ.ಮ್ಯಾಗೇರಿ)
ಕುಂಬಾರಹಳ್ಳ(ರಾಜಕುಮಾರ ನಾಗರಳ್ಳಿ 7353736115)
ಆಲಗೂರ(ಪಿ.ಮಾವಕರ 9845251545)
ಹಿರೇಪಡಸಲಗಿ(ಸಚಿನ ಮಾಚಕನೂರ 9964384118)
ನಾಗನೂರ(ವಿಠ್ಠಲ ನಾಯ್ಕ 8618640776)
ಕವಟಗಿ(ಜಿ.ಪಿ.ಶೆಟ್ಟಿ 9731320739)
ಚಿಕ್ಕಪಡಸಲಗಿ(ರವಿ ಹಾದಿಮನಿ 8884949266)
ಲಿಂಗದಕಟ್ಟಿ(ಆರ್.ಎಸ್.ಹುಕ್ಕೇರಿ 9036078951)
ಕುಂಚನೂರ ಜಕನೂರ(ಸಿದರಾಯ ಸುರಗಿಹಳ್ಳಿ 7411121617)
ಚಿನಗುಂಡಿ ಬಿದರಿ(ರಾಮನಗೌಡ ಪಾಟೀಲ 8277423988).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.