ADVERTISEMENT

‘ಕುವೆಂಪು ನವೋದಯ ಸಾಹಿತ್ಯದ ಹರಿಕಾರ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 16:48 IST
Last Updated 29 ಡಿಸೆಂಬರ್ 2020, 16:48 IST
ಬನಹಟ್ಟಿಯ ಎಸ್‍ಟಿಸಿ ಕಾಲೇಜಿನಲ್ಲಿ ನಡೆದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಬನಹಟ್ಟಿಯ ಎಸ್‍ಟಿಸಿ ಕಾಲೇಜಿನಲ್ಲಿ ನಡೆದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು   

ರಬಕವಿ ಬನಹಟ್ಟಿ: ಇಂಗ್ಲಿಷ್‍ ಕವನಗಳಿಂದ ಪ್ರಭಾವಿತರಾಗಿದ್ದ ಕುವೆಂಪು ನವೋದಯ ಸಾಹಿತ್ಯದ ಹರಿಕಾರರಾಗಿದ್ದರು ಎಂದು ಕನ್ನಡ ಉಪನ್ಯಾಸಕ ಪ್ರೊ.ಸುರೇಶ ನಡೋಣಿ ತಿಳಿಸಿದರು.

ಎಸ್‍ಟಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಜಗದ ಕವಿ ಯುಗದ ಕವಿಯಾಗಿದ್ದರು. ಶ್ರೀ ರಾಮಾಯಣ ದರ್ಶನ ಮಹಾಕಾವ್ಯವನ್ನು ರಚಿಸುವುದರ ಮೂಲ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಕತೆ, ಕಾದಂಬರಿ, ಶಿಶು ಸಾಹಿತ್ಯ, ವಿಮರ್ಶೆ, ನಾಟಕ, ಮಹಾಕಾವ್ಯ, ವೈಚಾರಿಕ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡ ವಿಶ್ವಶ್ರೇಷ್ಠ ಸಾಹಿತಿಯಾಗಿದ್ದರು ಎಂದು ನಡೋಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT