
ಅಮೀನಗಡ: ಶಿವನ ಧ್ಯಾನ ಹಾಗೂ ಪೂಜೆಯಿಂದ ಬದುಕು ಸಾರ್ಥಕವಾಗುತ್ತದೆ ಎಂದು ಕವಿತಾ ಪ್ರಕಾಶ ಜೆ.ಪರಪ್ಪ ಹೇಳಿದರು.
ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸಪ್ತಸ್ವರ ಮೆಲೋಡಿಸ್ ವಾರ್ಷಿಕೋತ್ಸವದ ಹಾಗೂ ಮಹಾಶಿವರಾತ್ರಿ ನಿಮಿತ್ತ ಹಾಸ್ಯ ರಸಮಂಜರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಾಲುಮತ ಸಮಾಜದ ಅಧ್ಯಕ್ಷ ಜಗದೀಶ ಬಿಸಲದಿನ್ನಿ ಮಾತನಾಡಿ ಪಟ್ಟಣದಲ್ಲಿ ಅನೇಕ ಕಲಾವಿದರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು, ನಾಟಕ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಡಾ. ವಿಜಯ ದಡ್ಡೇನವರ, ಎಚ್. ಎನ್. ಶೇಬನ್ನವರ, ಮುಖಂಡರಾದ ಸಂತೋಷ ಹೊಕ್ರಾಣಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ವಿ. ಎಸ್. ಕನ್ನೂರ, ಸಂತೋಷ ಐಹೊಳ್ಳಿ, ಬಾಬು ಛಬ್ಬಿ, ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶೆಟ್ಟಿ, ಶಿವಾಚಾರ ಸಮಾಜದ ಅಧ್ಯಕ್ಷ ಬಿ. ಎಸ್. ನಿಡಗುಂದಿ, ಬಸವರಾಜ ಬೇವಿನಮಟ್ಟಿ,ನಿಂಗಪ್ಪ ನಾಗರಾಳ, ಅಜ್ಮಿರ್ ಮುಲ್ಲಾ, ವಿಜಯ ಯಡ್ರಾಮಿ, ಪಿ. ಬಿ. ಮುಳ್ಳೂರ, ಫಕೀರಪ್ಪ ವಡ್ಡರ, ಶ್ರೀಕಾಂತ ಹಾಸಲಕರ, ಮೆಲೋಡಿಸನ ರಮೇಶ ದಡ್ಡೇನವರ,ಮಲ್ಲು ನಿರುಗ್ಗಿ,ಸಂಗಮೇಶ ಬಾರಿಗಿಡದ, ಪುಂಡಲೀಕ ತೆಗ್ಗಿನಮನಿ, ಪ್ರಸಾದ ಶಿರೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.