
ಲೋಕಾಪುರ: ಪೂರ್ಣಾನಂದ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ರಥೋತ್ಸವ ಜರುಗಿತು.
ಮಠದಲ್ಲಿ ಬೆಳಿಗ್ಗೆ ಕಾಕಡಾರತಿ, ಪರಮಹಂಸ ಸ್ವಾಮೀಜಿಗೆ ಎಕದಶ ಆವರ್ತನ ರುದ್ರಾಭಿಷೇಕ, ರಥಾಂಗ ಹೋಮ ನಡೆಯಿತು. ರಥವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಅರ್ಚಕರ ಮಂತ್ರಪಠನ ನಡೆಯಿತು. ಮಹಿಳೆಯರ ಆರತಿ, ಸಂತರ ಭಜನೆ, ವಿವಿಧ ವಾದ್ಯಮೇಳದೊಂದಿಗೆ ರಥವನ್ನು ಭಕ್ತರು ಎಳೆದರು.
ಉತ್ತತ್ತಿ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ರಥವು ದೇಸಾಯಿಯವರ ವಾಡೆಯವರೆಗೆ ಹೋಗಿ ಮರಳಿ ಮಠಕ್ಕೆ ತಲುಪಿತು. ನಂತರ ಮಹಾಮಂಗಳಾರತಿ ನೈವೇದ್ಯ ಮಹಾಪ್ರಸಾದ ಜರುಗಿತು. ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಮಲ್ಲಪ್ಪ ಅಂಗಡಿ, ಶಿವನಗೌಡ ಪಾಟೀಲ, ಬಸವಪ್ರಬು ಕಾತರಕಿ, ಭೀಮನಗೌಡ ಪಾಟೀಲ, ಮುದಕಪ್ಪ ಭಜಂತ್ರಿ, ಕೃಷ್ಣಾ ಭಜಂತ್ರಿ, ಹಣಮಂತ ಕಲಬಸಪ್ಪನವರ ಅರುಣ ಭೋವಿ, ಗಂಗಪ್ಪ ಗಂಗಣ್ಣವರ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.