ADVERTISEMENT

ಬಾಗಲಕೋಟೆ: ಉಪನೋಂದಣಿ ಅಧಿಕಾರಿ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:12 IST
Last Updated 30 ಜುಲೈ 2024, 16:12 IST

ಬಾಗಲಕೋಟೆ: ಜಿಲ್ಲೆಯ ಕೆರೂರಿನ ಉಪನೋಂದಣಿ ಕಚೇರಿಯಲ್ಲಿ ₹5 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಉಪನೋಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ಹಾಗೂ ಕಂಪ್ಯೂಟರ್ ಆಪ್‌ರೇಟರ್ ಕುಮಾರ ಗೌಡರ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಳಗಂಟಿ ಗ್ರಾಮದ ಮುತ್ತಪ್ಪ ನಾಯ್ಕರ ಎಂಬುವವರು ಕೆರೂರ ಹದ್ದಿನಲ್ಲಿರುವ ಜಮೀನನ್ನು ನೋಂದಣಿ ಮಾಡಿ ಕೊಡಲು ನೊಂದಣಿ ಅಧಿಕಾರಿ ಮೋದಿನಸಾಬ್ ಹವಾಲ್ದಾರ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೋಂದಣಿ ಅಧಿಕಾರಿ ಸೂಚನೆ ಮೇರೆಗೆ ಕಂಪ್ಯೂಟರ್ ಆಪರೇಟರ್ ಕುಮಾರ ಮುಂಗಡವಾಗಿ ₹10 ಸಾವಿರ ಹಣವನ್ನು ರಾಘು ಭಾವಿಕಟ್ಟಿ ಎಂಬುವವರ ಪೋನ್‌ ಪೇ ಮೂಲಕ ಪಡೆದಿದ್ದರು. ಈ ಕುರಿತು ಮುತ್ತಪ್ಪ  ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಬಾಕಿ ₹5 ಸಾವಿರ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಎಂ.ಎಚ್‌. ಬಿದರಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.