ADVERTISEMENT

ಬಾಗಲಕೋಟೆ: ಖಾಡೆಗೆ ಮಧುರಚೆನ್ನ ನುಡಿಸಿರಿ ಸಾಹಿತ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:20 IST
Last Updated 27 ಜುಲೈ 2025, 2:20 IST
ಪ್ರಕಾಶ ಖಾಡೆ
ಪ್ರಕಾಶ ಖಾಡೆ   

ಬಾಗಲಕೋಟೆ: ನಗರದ ಸಾಹಿತಿ ಪ್ರಕಾಶ ಖಾಡೆ ಅವರಿಗೆ ಧಾರವಾಡದ ಚೇತನ ಫೌಂಡೇಷನ್ ಕೊಡುವ ರಾಜ್ಯಮಟ್ಟದ ‘ಮಧುರಚೆನ್ನ ನುಡಿಸಿರಿ ಸಾಹಿತ್ಯ ಪ್ರಶಸ್ತಿ’ ದೊರೆತಿದೆ.

ವಿಜಯಪುರ ಕಂದಗಲ್‌ ಹನಮಂತರಾಯ ರಂಗಮಂದಿರದಲ್ಲಿ ಜುಲೈ 27ರಂದು ಜರುಗುವ ‘ವಿಜಯಪುರ ನುಡಿಸಿರಿ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.

ಪ್ರಕಾಶ ಖಾಡೆ ಅವರು ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಶಿಕ್ಷಣ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನು ರಚಿಸಿದ್ದಾರೆ. ‘ಹಲಸಂಗಿ ಗೆಳೆಯರಲ್ಲಿ ಮಧುರಚೆನ್ನರು ಆದ್ಯ ಕವಿಗಳು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಖಾಡೆ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.