
ಮಹಾಲಿಂಗಪುರ: ‘ಅಶುಚಿತ್ವದ ಪರಿಸರದಿಂದಾಗಿ ಮಕ್ಕಳು ಮತ್ತು ದೊಡ್ಡವರು ಜಂತು ಹುಳು ಬಾಧೆಗೆ ಒಳಗಾಗುತ್ತಿದ್ದು ಮಾತ್ರೆ ಸೇವಿಸುವುದರ ಮೂಲಕ ಜಂತುರಹಿತರಾಗಬೇಕು’ ಎಂದು ಆರೋಗ್ಯ ಸಹಾಯಕಿ ಮಹಾದೇವಿ ಮೆಕ್ಕಳಕಿ ಹೇಳಿದರು.
ಸಮೀಪದ ಕೆಸರಗೊಪ್ಪದ ಮಾಯವ್ವ ವಿಠ್ಠಲ ಕಪರಟ್ಟಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಂತು ಹುಳು ನಿವಾರಣಾ ಕಾರ್ಯಕ್ರಮದಡಿ ಮಕ್ಕಳಿಗೆ ಮಾತ್ರೆ ವಿತರಿಸಿ ಮಾತನಾಡಿದರು.
‘ಜಂತುಹುಳು ಬಾಧೆಯಿಂದ ಮಕ್ಕಳು ರಕ್ತ ಹೀನತೆಯಿಂದ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಾರೆ. ಜಂತುಹುಳು ಮಾತ್ರೆಯನ್ನು ಸೇವಿಸುವುದರಿಂದ ಬಾಧೆಯಿಂದ ತಪ್ಪಿಕೊಳ್ಳಲು ಸಾಧ್ಯ’ ಎಂದರು.
ಶಾಲೆ ಅಧ್ಯಕ್ಷ ಮಹಾದೇವ ಕಪರಟ್ಟಿ, ಜೋತೆಪ್ಪ ಕಪರಟ್ಟಿ, ಮುಖ್ಯಶಿಕ್ಷಕಿ ಎ.ಎಂ.ಕಪರಟ್ಟಿ, ಶಿಕ್ಷಕ ಮುತ್ತು ಮೋಕಾಶಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.