ADVERTISEMENT

ಮಹಾಲಿಂಗಪುರ | ದುರ್ಗಾದೇವಿ ಭಂಡಾರ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 3:07 IST
Last Updated 19 ಜುಲೈ 2025, 3:07 IST
ಮಹಾಲಿಂಗಪುರದ ದುರ್ಗಾದೇವಿ ಜಾತ್ರೆ ಅಂಗವಾಗಿ ದೇವಿ ಮೆರವಣಿಗೆ ನಡೆಯಿತು
ಮಹಾಲಿಂಗಪುರದ ದುರ್ಗಾದೇವಿ ಜಾತ್ರೆ ಅಂಗವಾಗಿ ದೇವಿ ಮೆರವಣಿಗೆ ನಡೆಯಿತು   

ಮಹಾಲಿಂಗಪುರ: ಗ್ರಾಮದೇವತೆ ದುರ್ಗಾದೇವಿ ಹೆಸರಿನಲ್ಲಿ ವಾರ ಹಿಡಿಯುವ ಕೊನೆಯ ದಿನವಾದ ಶುಕ್ರವಾರ ಭಕ್ತರು ಭಂಡಾರವನ್ನು ತೂರುವ ಮೂಲಕ ವಿಜೃಂಭಣೆಯಿಂದ ದುರ್ಗಾದೇವಿ ಜಾತ್ರೆ ಆಚರಿಸಿದರು.

ಜಾತ್ರೆಯ ಮುನ್ನಾದಿನವಾದ ಗುರುವಾರ ರಾತ್ರಿ ಪರಸು ಕೋಲೂರ ಅವರಿಂದ ರಸಮಂಜರಿ ಕಾರ್ಯಕ್ರಮ, ಶುಕ್ರವಾರ ಬೆಳಗಿನ ಜಾವ ಭಕ್ತರಿಂದ ದೀಡ್ ನಮಸ್ಕಾರ, ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಿದವು.

ನಂತರ ಪರಸ್ಪರ ಭಂಡಾರ ಎರಚುತ್ತ ದೇವಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ದೇವಿಗೆ ಉಡಿ ತುಂಬಿ ಪೂಜೆ ನೆರವೇರಿಸಿದರು. ಅನ್ನಸಂತರ್ಪಣೆ ಜರುಗಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.