ಮಹಾಲಿಂಗಪುರ: ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಕೆಟ್ಟುಹೋಗಿದ್ದ ಎಲ್‍ಇಡಿ ದೀಪಗಳನ್ನು ತೆಗೆದು ಹೊಸ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ಈ ಮೂಲಕ ನಿವಾಸಿಗಳ ಕತ್ತಲೆ ಆತಂಕ ನಿವಾರಿಸಲಾಗಿದೆ.
ಪುರಸಭೆ ವತಿಯಿಂದ ಪಟ್ಟಣದ 1, 2, 3, 21, 22ನೇ ವಾರ್ಡ್‍ನ ಕೆಲವು ಪ್ರದೇಶಗಳಲ್ಲಿ ಕಳೆದ ವರ್ಷ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಕೆಲ ಎಲ್‍ಇಡಿ ದೀಪಗಳು ಬೆಳಗುತ್ತಿರಲಿಲ್ಲ. ಎಲ್‍ಇಡಿ ದೀಪ ಅಳವಡಿಸುವ ಟೆಂಡರ್ ಪಡೆದಿದ್ದ ಬೆಂಗಳೂರಿನ ಸುಲ್ತಾನ್‍ಉಲ್ಲಾ ಖಾನ್ (ಯುನೈಟೆಡ್ ಎಂಜಿನಿಯರ್ಸ್) ಅವರಿಗೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹಾಗೂ ಎಂಜಿನಿಯರ್ ಎಸ್.ಎಂ.ಕಲಬುರಗಿ ಅವರು, ಸಮರ್ಪಕ ನಿರ್ವಹಣೆಗೆ ಸೂಚಿಸಿದ್ದರು.
ಎರಡು ವರ್ಷಗಳ ನಿರ್ವಹಣೆ ನಿಬಂಧನೆ ಹೊಂದಿರುವ ಗುತ್ತಿಗೆದಾರ, ಹಾಳಾದ ಎಲ್‍ಇಡಿ ದೀಪಗಳ ಜಾಗದಲ್ಲಿ ಹೊಸ ದೀಪಗಳನ್ನು ಅಳವಡಿಸಿದರು. ಕೆಲ ದುರಸ್ತಿ ಇರುವ ದೀಪಗಳನ್ನು ಸರಿಪಡಿಸಿ ದೀಪಗಳು ಬೆಳಗುವಂತೆ ಮಾಡಲು ಕ್ರಮ ಕೈಗೊಂಡರು.
ಈ ಕುರಿತು ‘ಪ್ರಜಾವಾಣಿ’ಯಲ್ಲಿ ಜೂ.13 ರಂದು ‘ವರ್ಷದಲ್ಲೇ ಹಾಳಾದ ಎಲ್‍ಇಡಿ ದೀಪ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ವರದಿ ಗಮನಿಸಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಕ್ತ ಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.