ಮಹಾಲಿಂಗಪುರ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಅನ್ವಯ ಪ್ರಾಧಿಕಾರ ರಚಿಸಿ ಬುಧವಾರ ಹೊಸ ನಾಮಫಲಕ ಹಾಕಲಾಗಿದೆ.
ಪ್ರಾಧಿಕಾರ ರಚನೆಯಾದ ನಂತರ ಅಳವಡಿಸಿದ ನಾಮಫಲಕದಲ್ಲಿ ಸಿಬ್ಬಂದಿ ವರ್ಗಾವಣೆಯಾಗಿದ್ದರೂ ಹಾಗೂ ನಿಧನರಾಗಿದ್ದರೂ ಹಾಗೇ ಮುಂದುವರಿಸಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಅ. 14 ರಂದು ‘ಬದಲಾಗದ ನಾಮಫಲಕ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ವರದಿ ಗಮನಿಸಿದ ಮುಖ್ಯಾಧಿಕಾರಿ ಎನ್.ಎ. ಲಮಾಣಿ, ಹೊಸ ನಾಮಫಲಕ ಅಳವಡಿಸಲು ಕ್ರಮ ಕೈಗೊಂಡರು.
ಮೇಲ್ಮನವಿ ಪ್ರಾಧಿಕಾರದಲ್ಲಿ ಮುಖ್ಯಾಧಿಕಾರಿ ಎನ್.ಎ. ಲಮಾಣಿ ಇದ್ದು, ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ಎಸ್.ಎನ್. ಪಾಟೀಲ, ಆರ್.ಎಸ್. ಚವಾಣ, ಪಿ.ವೈ. ಸೊನ್ನದ, ಸಿ.ಎಸ್. ಮಠಪತಿ, ಎಂ.ಎಂ. ಮುಗಳಖೋಡ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ಎಂ.ಎಸ್. ಮುಲ್ಲಾ, ಆರ್.ಬಿ. ಸೋರಗಾಂವಿ, ಎ.ಆರ್. ಸಣ್ಣಕ್ಕಿ, ಪಿ.ಡಿ. ನಾಗನೂರ, ಎಂ.ಎಂ. ಹಂಚಾಟೆ ಅವರನ್ನೊಳಗೊಂಡ ಹೊಸ ಪ್ರಾಧಿಕಾರ ರಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.