ಮಹಾಲಿಂಗಪುರ: ‘ಜಾತ್ರೆಗಳು ಗ್ರಾಮೀಣ ಸೌಹಾರ್ದತೆ, ಆರ್ಥಿಕ ಭದ್ರತೆ, ಧಾರ್ಮಿಕ ಆಚರಣೆಗಳು, ಆಚಾರ-ವಿಚಾರಗಳು, ಜನಪದ ಕಲೆ, ಸಂಪ್ರದಾಯಗಳು ಸೇರಿದಂತೆ ಹಲವು ಸಂಸ್ಕೃತಿ, ಪರಂಪರೆ ಹಾಗೂ ನೈತಿಕ ಮೌಲ್ಯಗಳ ಪ್ರತೀಕವಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿ ಗೋಶಾಲೆ ಬಳಿ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಜಾತ್ರಾ ಕಮಿಟಿಯಿಂದ ಬುಧವಾರ ಹಮ್ಮಿಕೊಂಡಿದ್ದ ಎರಡನೇ ದಿನದ ಹಾಸ್ಯ ಸಂಜೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸೈನಿಕ ಶ್ರೀಶೈಲ ಭಜಂತ್ರಿ, ಕವಿತಾ ಕೊಣ್ಣೂರ ಮಾತನಾಡಿದರು. ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಹುಚ್ಚೇಶ ವಡ್ಡರ, ಕಲ್ಲಪ್ಪ ಚಿಂಚಲಿ, ಪ್ರಕಾಶ ತಟ್ಟಿಮನಿ, ಚನ್ನಯ್ಯ ಚಟ್ಟಿಮಠ, ಚಂದು ಅಷ್ಟಗಿ, ಗುರು ಜಂಬಗಿ, ಭೀಮನಗೌಡ ಪಾಟೀಲ, ರವಿ ಯರಡ್ಡಿ, ವಿರುಪಾಕ್ಷ ಬಾಟ ಇತರರು ಇದ್ದರು.
ಸಿದ್ಪಪ್ಪ ಬಿದರಿ, ಮನು ಮಹಾಲಿಂಗಪುರ, ಗಣೇಶ ಶಿರೋಳ, ಪ್ರಕಾಶ ಅಂಬಿ, ದೀಪಾ ಹಳಿಯಾಳ ಗಾಯನ ಪ್ರಸ್ತುತಪಡಿಸಿದರು. ಜ್ಯೂ.ವಿಷ್ಣುವರ್ಧನ ರವಿ ಕೋರೆ, ದೀಪಿಕಾ, ಪ್ರವೀಣ ಗಸ್ತಿ, ಯಲ್ಲೇಶ ಮೆಳವಂಕಿ ಪ್ರತಿಭೆ ಪ್ರದರ್ಶಿಸಿದರು. ಮುತ್ತು ಹಳ್ಯಾಳ ಜಾನಪದ ಗೀತೆ ಹಾಡಿ ರಂಜಿಸಿದರು. ತನುಶ್ರೀ ಹುಬ್ಬಳ್ಳಿ ನೃತ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.