ADVERTISEMENT

ಮಹಾಲಿಂಗಪುರ: ಕಲ್ಲು ತೂರಾಟ ಘಟನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 8:34 IST
Last Updated 21 ಫೆಬ್ರುವರಿ 2026, 8:34 IST
ಮಹಾಲಿಂಗಪುರದ ಅಕ್ಕಿಮರಡಿ-ಢವಳೇಶ್ವರ ಕೂಡು ರಸ್ತೆಯ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ರವಿ ಜವಳಗಿ ಮಾತನಾಡಿದರು
ಮಹಾಲಿಂಗಪುರದ ಅಕ್ಕಿಮರಡಿ-ಢವಳೇಶ್ವರ ಕೂಡು ರಸ್ತೆಯ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ರವಿ ಜವಳಗಿ ಮಾತನಾಡಿದರು   

ಮಹಾಲಿಂಗಪುರ: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಪಟ್ಟಣದ ಅಕ್ಕಿಮರಡಿ-ಢವಳೇಶ್ವರ ಕೂಡು ರಸ್ತೆಯ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮುಖಂಡ ರವಿ ಜವಳಗಿ ಮಾತನಾಡಿ, ‘ಶಾಂತಿಯುತವಾಗಿ ನಡೆದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೂರ್ವ ನಿಯೋಜಿತವಾಗಿ ಈ ಕೃತ್ಯ ನಡೆದಿದೆ. ಕಲ್ಲು ತೂರಾಟ ಮಾಡಿದ ಎಲ್ಲರನ್ನೂ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಮಹೇಶ ಜಾಧವ, ಮಲ್ಲಪ್ಪ ಅಂಬನ್ನಗೋಳ, ಸುರೇಶ ಜಾಧವ, ಅರ್ಜುನ ಮೋಪಗಾರ, ಜ್ಯೋತಿಬಾ ಪವಾರ, ನಾಗಪ್ಪ ಪವಾರ, ಭೀಮಶಿ ಮೋಪಗಾರ, ವಸಂತ ನೂಲಿ, ಗೋವಿಂದ ಘೋರ್ಪಡೆ, ನಟರಾಜ ಸಬಕಾಳೆ, ವಿ.ಎಸ್.ಘೋರ್ಪಡೆ  ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.