ADVERTISEMENT

ಬಾದಾಮಿ | ಮಂಗಗಳ ಕಾಟ: ಸ್ಮಾರಕ ಬಳಿ ಸರಕು ಸಂಗ್ರಹ ಕೊಠಡಿ ನಿರ್ಮಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 14:17 IST
Last Updated 6 ಸೆಪ್ಟೆಂಬರ್ 2023, 14:17 IST
ಬಾದಾಮಿ ಸ್ಮಾರಕಗಳ ಪರಿಸರದಲ್ಲಿ ಪ್ರವಾಸಿಗರ ಕಡೆಗೆ ನೋಡುತ್ತಿರುವ ಮಂಗಗಳು
ಬಾದಾಮಿ ಸ್ಮಾರಕಗಳ ಪರಿಸರದಲ್ಲಿ ಪ್ರವಾಸಿಗರ ಕಡೆಗೆ ನೋಡುತ್ತಿರುವ ಮಂಗಗಳು   

ಬಾದಾಮಿ: ಚಾಲುಕ್ಯರ ಗುಹಾಂತರ ದೇವಾಲಯ, ಮ್ಯೂಸಿಯಂ, ಭೂತನಾಥ ದೇವಾಲಯ ಮತ್ತು ಬಾವನ್ ಬಂಡೆ ಕೋಟೆಯ ಮೇಲೆ ಪ್ರವಾಸಿಗರು ಹೋದರೆ ಮಂಗಗಳು ಕೈಯಲ್ಲಿರುವ ಚೀಲ, ಮಹಿಳೆಯರ ಪರ್ಸ್‌ಗಳನ್ನು ಕಸಿದುಕೊಂಡು ಬೆಟ್ಟದ ಮೇಲೆ ಹೋಗುತ್ತಿವೆ.

ಅನೇಕ ಪ್ರವಾಸಿಗರು ನಗದು ಮತ್ತು ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿ ಸರಕು ಸಂಗ್ರಹ ಕೊಠಡಿಯನ್ನು ಮಾಡಿದರೆ ಪ್ರವಾಸಿಗರು ಅಲ್ಲಿ ತಮ್ಮ ಕೈಚಿಲ ಮತ್ತು ಪರ್ಸುಗಳನ್ನು ಇಟ್ಟು ಹೋಗಲು ಅನುಕೂಲವಾಗುತ್ತದೆ.

ಪ್ರವಾಸಕ್ಕೆ ಬಂದಾಗ ಮನೆ ಕಳ್ಳತನ ಆಗಬಹುದೆಂದು ಮಹಿಳೆಯರು ತಮ್ಮ ಪರ್ಸಿನಲ್ಲಿ ಚಿನ್ನದ ಒಡವೆ ಮತ್ತು ಹಣವನ್ನು ತೆಗೆದುಕೊಂಡು ಬಂದಿರುತ್ತಾರೆ. ಮಂಗಗಳ ಕೀಟಲೆ ಬಗ್ಗೆ ಪ್ರವಾಸಿಗರಿಗೆ ಗೊತ್ತಿರುವುದಿಲ್ಲ.

ADVERTISEMENT

ಸ್ಮಾರಕಗಳಿಗೆ ಬರುವ ಪ್ರವಾಸಿಗರು ಮಂಗಗಳಿಗೆ ತಿನ್ನಲು ಏನಾದರೂ ಕೊಡುವರು. ಕುಡಿಯಲು ನೀರಿನ ಬಾಟಲ್ ಕೊಡುತ್ತಾರೆ. ಈ ಆಸೆಯನ್ನು ಇಟ್ಟುಕೊಂಡು ಇಲ್ಲಿನ ಮಂಗಗಳು ಪ್ರವಾಸಿಗರ ಕೈಯನ್ನೇ ನೋಡುತ್ತಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಸ್ತುಗಳ ಸಂಗ್ರಹ ಕೊಠಡಿ ಮಾಡಿ ಪ್ರವಾಸಿಗರ ಹಿತ ಕಾಪಾಡಿ.

ಪ್ರಭುಗೌಡ ಪಾಟೀಲ ಸುರಪೂರ, ರಮೇಶಕುಮಾರ ಹೊಸಮನಿ ಗಂಗಾವತಿ, ಪ್ರವಾಸಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.