ADVERTISEMENT

ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ: ಶಾಂತಮ್ಮ ತಾಯಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:01 IST
Last Updated 5 ನವೆಂಬರ್ 2025, 4:01 IST
ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಗ್ರಾಮದಲ್ಲಿ  ಜರುಗಿದ ಕೋಟಿಜಪಯಜ್ಞ  ಸಮಾರೋಪದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು
ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಗ್ರಾಮದಲ್ಲಿ  ಜರುಗಿದ ಕೋಟಿಜಪಯಜ್ಞ  ಸಮಾರೋಪದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು   

ಗುಳೇದಗುಡ್ಡ: ಗ್ರಾಮೀಣ ಪ್ರದೇಶದಲ್ಲಿ ಮದುವೆಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಹಾಗೆ ಮಾಡದೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹ ಮಾಡಿಕೊಂಡರೆ ಆರ್ಥಿಕವಾಗಿ ದುಂದುವೆಚ್ಚ ಮಾಡದೆ ಅದನ್ನು ಬ್ಯಾಂಕಿನಲ್ಲಿ ಡಿಪಾಜಿಟ್ ಮಾಡಿದರೆ ಭವಿಷ್ಯದಲ್ಲಿ ಅನುಕೂಲವಾಗುವುದು ಎಂದು ಶಾಂತಮ್ಮ ತಾಯಿಯವರು ಹೇಳಿದರು.

ತಾಲ್ಲೂಕಿನ ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ಮಂಗಳವಾರ ಪೂರ್ಣಾನಂದ ಮುನಿಗಳ ಆಶ್ರಮ ಮತ್ತು ಶ್ರದ್ದಾನಂದ ಮಠದಲ್ಲಿ ವಿಶ್ವಶಾಂತಿಗಾಗಿ ಜರುಗಿದ 16 ವರ್ಷದ ಕೋಟಿಜಪಯಜ್ಞ ಸಮಾರೋಪ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.

ಅದ್ದೂರಿಯಾಗಿ ಮದುವೆ ಮಾಡುವುದು ರೂಢಿ ಆಗಿದೆ. ಹಣ ಖರ್ಚು ಮಾಡದೆ ಉಳಿತಾಯ ಮಾಡಬೇಕು ಹಾಗೂ ಉತ್ತಮವಾಗಿ ಅನೋನ್ಯವಾಗಿ ಇರುವ ಬದುಕು ನಿಮ್ಮದಾಗಲಿ ಎಂದರು.

ADVERTISEMENT

ಹಾನಾಪೂರ ಎಸ್.ಪಿ.ಗ್ರಾಮ ಹಾಗೂ ಶ್ರದ್ದಾನಂದ ಶ್ರೀಮಠದ ಪರವಾಗಿ ಒಟ್ಟು ಎರಡು ಜೋಡಿ ವಿವಾಹಗಳನ್ನು ಮಾಡಿ ಕೊಡಲಾಯಿತು. ಗ್ರಾಮದ ಎಲ್ಲ ಯುವಕರು, ಗ್ರಾಮದ ಗುರು ಹಿರಿಯರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.