ADVERTISEMENT

ರಾಂಪುರ | ಬಿಸಿಯೂಟದ ಅಡುಗೆ ಸ್ಪರ್ಧೆ: ರೇಣುಕಾ ಪ್ರಥಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:10 IST
Last Updated 8 ಜನವರಿ 2026, 7:10 IST
ನಾಯನೇಗಲಿಯಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿಗಾಗಿ ನಡೆದ ಅಡುಗೆ ತಯಾರಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ನಾಯನೇಗಲಿಯಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿಗಾಗಿ ನಡೆದ ಅಡುಗೆ ತಯಾರಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ರಾಂಪುರ: ನಾಯನೇಗಲಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಬಿಸಿಯೂಟದ ಅಡುಗೆ ಸಿಬ್ಬಂದಿಗಾಗಿ ಜರುಗಿದ ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ರೇಣುಕಾ ಹೂಗಾರ ಪ್ರಥಮ ಸ್ಥಾನ ಪಡೆದರು.

ಮಧ್ಯಾಹ್ನ ಬಿಸಿಯೂಟದ ಮೆನುವಿನಲ್ಲಿರುವ ಬಿಸಿಬೇಳೆ ಬಾತ್ ತಯಾರಿಸುವ ಈ ಸ್ಪರ್ಧೆಯಲ್ಲಿ ರತ್ನಾ ಚಲವಾದಿ ದ್ವಿತೀಯ, ಬಸಮ್ಮ ಮಾಗಿ ತೃತೀಯ ಹಾಗೂ ಅನಸೂಯಾ ದಂಡಿನ ಚತುರ್ಥ ಸ್ಥಾನ ಪಡೆದರು.

ನಾಯನೇಗಲಿ ಕ್ಲಸ್ಟರ್ ಸಿಆರ್ ಪಿ ಎಂ.ಎಸ್.ಬಾರಕೇರ, ಎಸ್‌ಡಿಎಂಸಿ ಸದಸ್ಯೆ ಲಕ್ಷ್ಮೀ ಹೆಬ್ಬಾಳ, ವಿಜೇತರಿಗೆ ಬಹುಮಾನ ನೀಡಿದ ಎ.ಎಸ್.ಯರವಿನತೆಲಿಮಠ, ಹರಳೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸುಭಾಷ ಕಂದಗಲ್ಲ, ಶಿಕ್ಷಕರಾದ ಎನ್.ಬಿ.ಡೊಂಬರ, ಭಾರತಿ ಪಾಡೆವಾರ, ವಿದ್ಯಾರ್ಥಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.