ಬಾಗಲಕೋಟೆ: ‘ಬೀಳೂರು ಗುರುಬಸವ ಸಹಕಾರ ಸಂಘ ಪಾರದರ್ಶಕತೆ ಮೂಲಕ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ’ ಎಂದು ಬೆಳಗಾವಿ ವಿಭಾಗದ ಸಹಕಾರ ಸಂಘದ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣಗೊಳ ಹೇಳಿದರು.
ಬಿವಿವಿ ಸಂಘದ ಸಭಾಭವನದಲ್ಲಿ ಭಾನುವಾರ ಜರುಗಿದ ಬೀಳೂರು ಗುರುಬಸವ ಪತ್ತಿನ ಸಹಕಾರ ಸಂಘದ 25ನೇ ಸರ್ವ ಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಭದ್ರ ಭುನಾದಿ ಹೊಂದಿರುವ ಸಂಘವು ₹288 ಕೋಟಿ ಠೇವಣಿ ಹೊಂದಿರುವುದಲ್ಲದೇ, ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ’ ಎಂದರು.
ಅಧ್ಯಕ್ಷಯನ್ನು ವಹಿಸಿದ್ದ ಸಂಘ ಅಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ಸಂಘದ ಆರಂಭದಿಂದಲೂ ಸದಸ್ಯರಿಗೆ ಶೇ15 ರಷ್ಟು ಲಾಭಾಂಶ ನೀಡಲಾಗುತ್ತಿದೆ. 2025 ಮಾರ್ಚ್ ಅಂತ್ಯಕ್ಕೆ ₹1.92 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದರು.
‘ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದ ಪರಿಣಾಮ ಸಂಘ ಲಾಭದಲ್ಲಿ ನಡೆಯುತ್ತಿದೆ. ಹಿಮೋಫಿಲಿಯಾ ಹಾಗೂ ಥೇಲಸೆಮಿಯಾ ರೋಗದ ಚಿಕಿತ್ಸೆಗಾಗಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿಗೆ ₹23.36 ಲಕ್ಷ ನೀಡಲಾಗುತ್ತಿದೆ. ಸಂಘಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಸಂಘದ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದರು.
ಉಪಾಧ್ಯಕ್ಷರಾದ ಮುರಚಿಗೆಪ್ಪ ನಾರಾ, ವ್ಯವಸ್ಥಾಪಕ ಎಂ.ಎಚ್. ಹಿರೇಮಠ. ನಿರ್ದೇಶಕರಾದ ಗುರುಬಸವ ಸೂಳಿಭಾವಿ, ಈರಣ್ಣ ಅಥಣಿ, ಲಕ್ಷ್ಮೀ ನಾರಾಯಣ ಕಾಸಟ್, ವಿಜಯಕುಮಾರ ಅಂಗಡಿ, ವೀರಣ್ಣ ಹಲಕುರ್ಕಿ, ಶ್ರೀಶೈಲ ಅಂಗಡಿ, ಕುಮಾರ ಯಳ್ಳಿಗುತ್ತಿ, ಅಶೋಕ ಸಜ್ಜನ, ಮಲ್ಲಿಕಾರ್ಜುನ ಸಾಸನೂರ, ಪ್ರಕಾಶ ರೇವಡಿಗಾರ, ಪ್ರಭುಸ್ವಾಮಿ ಸರಗಣಾಚಾರಿ, ರುದ್ರು ಅಕ್ಕಿಮರಡಿ, ಜಯಪ್ರಕಾಶ ಬೆಂಡಿಗೇರಿ, ರಾಜು ನಾಯ್ಕರ್, ಭಾಗ್ಯಶ್ರೀ ಹಂಡಿ, ರೇಖಾ ಮೊರಬದ ಭಾಗವಹಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.