
ಮುಧೋಳ: ರಾತ್ರಿವೇಳೆ ಮನೆಗಳ ಕೀಲಿ ಮುರಿದು ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗಪ್ಪ ವಾಲ್ಮೀಕಿ (25) ಹಾಗೂ ರಾಮಾಚಾರಿ ಉರ್ಫ್ ಯಲ್ಲಪ್ಪ ಗಡ್ಡಿ ಬಂಧಿತರು. ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ತಿಳಿಯಿತು. ಬಂಧಿತರಿಂದ ಅಂದಾಜು ₹8 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.
ಕಳ್ಳರ ಬಂಧನ ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಸಿಪಿಐ ಎಂ.ಎನ್.ಶಿರಹಟ್ಟಿ, ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ಪಿ.ಎಸ್.ಮುರನಾಳ, ಎಎಸ್ಐ ಬಿ.ಎಸ್.ದಾಸವ್ವಗೋಳ ಹಾಗೂ ಆರ್.ಬಿ. ಕಟಗೇರಿ, ಎಚ್.ಬಿ.ದಾಸರ, ಎಂ.ಬಿ.ದಳವಾಯಿ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ವರಿಷ್ಠಾಧಿಕಾರಿ ತಿಳಿಸಿದರು.
ಜಮಖಂಡಿ ಡಿಎಸ್‍ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐ ಅಜಿತಕುಮಾರ ಹೊಸಮನಿ, ಪಿ.ಎಸ್.ಮುರನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.