ಮುಧೋಳ: ‘ಸಂಸ್ಥೆ ನಡೆಸುವುದು ಕಷ್ಟಕರ, ಸಂಗೀತ ಶಿಕ್ಷಣ ನಡೆಸುವುದು ಇನ್ನೂ ಕಠಿಣ. ಹಲವು ವರ್ಷಗಳಿಂದ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯಿಂದ ಪುಟ್ಟ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದು ಅರಳಿಕಟ್ಟಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ತಿಮ್ಮಾಣ್ಣ ಅರಳಿಕಟ್ಟಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪುಟ್ಟರಾಜ ಗವಾಯಿಗಳರವರ ಸ್ಮೃತಿ ಸಂಸ್ಥೆ ಸಹಯೋಗದಲ್ಲಿ ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ತಮ್ಮ ಫೌಂಡೇಷನ್ ವತಿಯಿಂದ ಪ್ರತಿ ವರ್ಷ ಸಂಸ್ಥೆಗೆ ₹10 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಲಪ್ಪ ಸಬರದ, ‘ಸಂಗೀತ ಅರಿತವನಿಗೆ ಜಗತ್ತಿನ ಹಂಗೇ ಇಲ್ಲ. ಭಾರತೀಯ ಸಂಗೀತದಲ್ಲಿ ಅಂತಹ ಶಕ್ತಿ ಇದೆ. ಈ ಹಿಂದೆ ಮನೆಯಲ್ಲಿ ಜರುಗುವ ಪ್ರತಿ ಕಾರ್ಯಕ್ರಮದಲ್ಲಿ ಹಿರಿಯರು ಹಾಡುಗಳು, ರೈತರ ಸುಗ್ಗಿ ಕಾಲದಲ್ಲಿ ಹಾಡುವ ಪದಗಳು ಮಾಯವಾಗುತ್ತಿವೆ. ಶಾಸ್ತ್ರೀಯ ಸಂಗೀತದ ಜೊತೆ ಜನಪದ ಕಲೆಗಳನ್ನು ಉಳಿಸಿ ಬೆಳೆಸಲು ಎಲ್ಲರ ಪ್ರೋತ್ಸಾಹ ಬೇಕಾಗಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ರೂಗಿ ಗ್ರಾಮ ಅಡವೇಶ್ವರ ಮಠದ ನಿತ್ಯಾನಂದ ಶ್ರೀ, ಕ.ಸಾ.ಪ. ಅಧ್ಯಕ್ಷ ಆನಂದ ಪೂಜಾರಿ, ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ್ ಗಣಾಚಾರಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಹಣಮಂತ ಮೇತ್ರಿ, ಪ್ರಧಾನ ಕಾರ್ಯದರ್ಶಿ ದೀಪಾ ಮಾದರ, ಕಲಾವಿದ ಶ್ರೀಮಂತ ಮಾಳಿ, ಇಂದುಮತಿ ಯಾದವಾಡ, ಬಾಬು ಬಾಲಪ್ಪನವರ, ಎಂ.ಆರ್. ಹಿರೇಮಠ, ಶಂಭುಲಿಂಗ ಮದರಖಂಡಿ, ಶಶಿ ಹೊಸಮನಿ, ಸದಾಶಿವ ಕುಂಬಾರ, ಪತ್ರಕರ್ತ ವಿ.ಎಸ್. ಮುನವಳ್ಳಿ, ಬಿ. ಎಚ್. ಬೀಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.