ಹುನಗುಂದ: ಜಾತಿಗಣತಿಯಲ್ಲಿ ರಾಜ್ಯದ ಮುಸಲ್ಮಾನರು ಗೊಂದಲ ಪಡುವ ಅಗತ್ಯವಿಲ್ಲ. ಧರ್ಮ ಕಾಲಂನಲ್ಲಿ ‘ಇಸ್ಲಾಂ’ ಎಂಬುದಾಗಿ ಜಾತಿ ಕಾಲಂನಲ್ಲಿ ‘ಮುಸ್ಲಿಂ’ ಎಂದು ಮತ್ತು ಉಪಜಾತಿ ಇದ್ದಲ್ಲಿ ಬಂಗಿ ಮುಸ್ಲಿಂ, ಮುಸ್ಲಿಂ ನದಾಫ, ಮುಸ್ಲಿಂ ಖಸಬ್, ಮುಸ್ಲಿಂ ಬಾಗವಾನ್ ಬಾಗ್ಬಾನ್ ಮುಸ್ಲಿಂ ಇತ್ಯಾದಿಗಳನ್ನು ಬರೆಯಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಕರೆ ನೀಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯು ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಗೆ ರಾಜ್ಯ ಸರ್ಕಾರ ಈಗಾಗಲೆ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಕೆಟೆಗೇರಿಯಲ್ಲಿ ಅನುಕೂಲತೆಗಳನ್ನು ಪಡೆದುಕೊಳ್ಳುವ ಉಪಜಾತಿ ಹೊಂದಿರುವವರು ಉಪಜಾತಿ ಕಾಲಂನಲ್ಲಿ ತಮ್ಮಗಳ ಉಪಜಾತಿ ಬರೆಯಬಹುದು.
ಈ ಬಗ್ಗೆ ಈಗಾಗಲೇ ಮುಸ್ಲಿಂ ಸಮುದಾಯದ 124 ಉಪಜಾತಿಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ. ಇದರಲ್ಲಿ ಯಾವುದೇ ಉಪಜಾತಿಗೆ ಸಂಬಂಧಿಸಿದಲ್ಲಿ ಉಪಜಾತಿ ನಮೂದಿಸಿರಿ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.