ADVERTISEMENT

ರಾಂಪುರ: ಕೃಷ್ಣಾ ನದಿ ಪಾತ್ರದ ಹಳ್ಳಿಗಳತ್ತ ಹಿನ್ನೀರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 3:21 IST
Last Updated 21 ಆಗಸ್ಟ್ 2025, 3:21 IST
ನಾರಾಯಣಪುರ ಜಲಾಶಯದ ಹಿನ್ನೀರು ಬುಧವಾರ ಕೃಷ್ಣಾನದಿ ಪಾತ್ರದ ಬಾಗಲಕೋಟೆ ತಾಲೂಕಿನ ಬೊಮ್ಮಣಗಿ, ಚಿಕ್ಕಮ್ಯಾಗೇರಿ ಗ್ರಾಮಗಳ ಜಮೀನುಗಳಿಗೆ ಪ್ರವೇಶಿಸಿದೆ
ನಾರಾಯಣಪುರ ಜಲಾಶಯದ ಹಿನ್ನೀರು ಬುಧವಾರ ಕೃಷ್ಣಾನದಿ ಪಾತ್ರದ ಬಾಗಲಕೋಟೆ ತಾಲೂಕಿನ ಬೊಮ್ಮಣಗಿ, ಚಿಕ್ಕಮ್ಯಾಗೇರಿ ಗ್ರಾಮಗಳ ಜಮೀನುಗಳಿಗೆ ಪ್ರವೇಶಿಸಿದೆ   

ರಾಂಪುರ: ನಾರಾಯಣಪುರ ಜಲಾಶಯದ ಹಿನ್ನೀರು ನಿಧಾನವಾಗಿ ಕೃಷ್ಣಾ ನದಿ ಪಾತ್ರದ ಬಾಗಲಕೋಟೆ ತಾಲ್ಲೂಕಿನ ಹಳ್ಳಿಗಳ ಜಮೀನುಗಳಿಗೆ ಬುಧವಾರ ಪ್ರವೇಶ ಮಾಡಿದೆ.

ಬೊಮ್ಮಣಗಿ ಹಾಗೂ ಚಿಕ್ಕಮ್ಯಾಗೇರಿ ಗ್ರಾಮಗಳ ನದಿ ಪಾತ್ರದಲ್ಲಿನ ಕಬ್ಬಿನ ಬೆಳೆಗಳಲ್ಲಿ ನೀರು ಕಾಣಿಸಿಕೊಂಡಿದ್ದು, ಆಲಮಟ್ಟಿ ಜಲಾಶಯದಿಂದ ಹರಿಬಿಡಲಾಗುವ ನೀರಿನ ಪ್ರಮಾಣ ಹೆಚ್ಚಾದಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿ ನದಿ ಪಾತ್ರದ ಹಳ್ಳಿಗಳ ಜಮೀನುಗಳಿಗೆ ನುಗ್ಗಲಿದೆ.

ಕಂದಾಯ ಇಲಾಖೆ ನದಿ ಪಾತ್ರದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನದಿಗಳತ್ತ ದನಕರುಗಳನ್ನು ಮೇಯಿಸಲು ಹೋಗದಂತೆ ಸೂಚಿಸಿದೆ. ಬುಧವಾರ ರಾಂಪುರ ಉಪ ತಹಶೀಲ್ದಾರ್‌ ಕಚೇರಿಯ ಕಂದಾಯ ನಿರೀಕ್ಷಕ ಜಯಪ್ರಕಾಶ ಅಳವಂಡಿ, ಗ್ರಾಮ ಆಡಳಿತಾಧಿಕಾರಿ ಪ್ರೇಮಕುಮಾರ ಬಂಡಿವಡ್ಡರ, ಸಿಬ್ಬಂದಿ ಜಹಾಂಗೀರ ವಾಲೀಕಾರ, ಬಂದೇನವಾಜ ವಾಲೀಕಾರ, ರಮ್ ಜಾನ್ ವಾಲೀಕಾರ ಚಿಕ್ಕಮ್ಯಾಗೇರಿ, ಬೊಮ್ಮಣಗಿ ಭಾಗದ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಗಳ ಜನರಿಗೆ ನದಿ ದಡದ ಜಮೀನುಗಳಿಗೆ ತೆರಳದಂತೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.