ADVERTISEMENT

ಬಾಗಲಕೋಟೆ | ಹೊಸ ವರ್ಷದ ಸ್ವಾಗತಕ್ಕೆ ಯುವಪಡೆ ಸಜ್ಜು, ಕ್ಯಾಮೆರಾಗಳ ಹದ್ದಿನ ಕಣ್ಣು

ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:29 IST
Last Updated 31 ಡಿಸೆಂಬರ್ 2025, 6:29 IST
ಬಾಗಲಕೋಟೆಯ ಬೇಕರಿಯೊಂದರಲ್ಲಿ ಹೊಸ ವರ್ಷಾಚರಣೆಗಾಗಿ ಕೇಕ್‌ಗಳನ್ನು ಸಿದ್ಧಪಡಿಸಿರುವುದು
ಬಾಗಲಕೋಟೆಯ ಬೇಕರಿಯೊಂದರಲ್ಲಿ ಹೊಸ ವರ್ಷಾಚರಣೆಗಾಗಿ ಕೇಕ್‌ಗಳನ್ನು ಸಿದ್ಧಪಡಿಸಿರುವುದು   

ಬಾಗಲಕೋಟೆ: ಹೊಸ ವರ್ಷದ ಸ್ವಾಗತಕ್ಕೆ ಯುವಪಡೆ ಸಜ್ಜಾಗಿದೆ. ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸ್ವಾಗತಿಸಲು ವಿವಿಧ ಸಿದ್ಧತೆ ನಡೆಸಿದ್ದಾರೆ.

ಕೇಕ್‌ ಅಂಗಡಿಗಳನ್ನು ದೀಪಗಳಿಂದ ಅಲಂಕಾರ ಮಾಡಲಾಗಿದೆ. ವಿವಿಧ ಬಗೆಯ ನೂರಾರು ಕೇಕ್‌ಗಳನ್ನು ಸಿದ್ಧಪಡಿಸಲಾಗಿದೆ. ಬುಧವಾರ ಸಂಜೆಯಿಂದ ರಾತ್ರಿಯವರೆಗೂ ಜನರು ಕೇಕ್‌ಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಮದ್ಯದ ಅಂಗಡಿಗಳಲ್ಲಿಯೂ ಎಲ್ಲ ಬಗೆಯ ಬ್ರಾಂಡ್‌ಗಳನ್ನು ಸಂಗ್ರಹಿಸಲಾಡಲಾಗಿದೆ. ಬೆಳಿಗ್ಗೆಯಿಂದಲೇ ಮದ್ಯಕ್ಕೆ ಬೇಡಿಕೆ ಹೆಚ್ಚಲಿದೆ. ಅಲ್ಲಲ್ಲಿ ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸಲಾಗಿದೆ.

ADVERTISEMENT

ಬಂದೋಬಸ್ತ್: ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲೆಯ ಪ್ರಮುಖ ಸರ್ಕಲ್, ಬಾರ್, ಕ್ಲಬ್‌, ರೆಸಾರ್ಟ್ ಮುಂತಾದೆಡೆ 570 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಆರು ಮಂದಿ ಡಿಎಸ್‌ಪಿ, 13 ಮಂದಿ ಇನ್‌ಸ್ಪೆಕ್ಟರ್, 38 ಪಿಎಸ್‌ಐ, 74 ಎಎಸ್‌ಐ, 800 ಸಿವಿಲ್‌ ಸಿಬ್ಬಂದಿ, 400 ಗೃಹರಕ್ಷಕ ಸಿಬ್ಬಂದಿ, 10 ಡಿಎಆರ್ ತುಕಡಿ, ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಚಲಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೈಕ್‌ ಸ್ಟಂಟ್‌ ಮಾಡಬೇಡಿ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಿ ಎಂದು ಸೂಚಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಹಚ್ಚುವುದನ್ನು ನಿಷೇಧಿಸಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌, ಬಾರ್, ಕ್ಲಬ್ ನಿಗದಿತ ಸಮಯದೊಳಗೆ ಬಂದ್ ಮಾಡಬೇಕು. ಮಹಿಳೆ, ಮಕ್ಕಳು, ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಕ್ರಮಕೈಗೊಳ್ಳಲಾಗುವುದು. ತುರ್ತು ಪರಿಸ್ಥಿತಿಯಲ್ಲಿ 112 ವಾಹನಕ್ಕೆ ಕರೆ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.