ADVERTISEMENT

ಪೌಷ್ಟಿಕ ಆಹಾರ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:42 IST
Last Updated 25 ಸೆಪ್ಟೆಂಬರ್ 2020, 16:42 IST
ಕಾರ್ಯಕ್ರಮಕ್ಕೆ ಪಿಡಿಒ ಶೃತಿ ರಾಮಾಪೂರ ಚಾಲನೆ ನೀಡಿದರು
ಕಾರ್ಯಕ್ರಮಕ್ಕೆ ಪಿಡಿಒ ಶೃತಿ ರಾಮಾಪೂರ ಚಾಲನೆ ನೀಡಿದರು   

ಬಾದಾಮಿ: ಆರೋಗ್ಯವಂತ ಮಕ್ಕಳು ಜನಿಸಲು ಗರ್ಭಿಣಿಯರಿಗೆ ಮತ್ತು ಮಕ್ಕಳು ಆರೋಗ್ಯವಾಗಿ ಬೆಳೆಯಲು ಪೌಷ್ಟಿಕ ಆಹಾರವನ್ನು ಕೊಡಬೇಕು ಎಂದು ಪಿಡಿಒ ಶೃತಿ ರಾಮಾಪೂರ ಹೇಳಿದರು.

ತಾಲ್ಲೂಕಿನ ತೆಮಿನಾಳ ಗ್ರಾಮದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಂಜುಳಾ ಗುರಾಣಿ, ಗರ್ಭಿಣಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಮಕುಂಬಿ ಪಿಂಜಾರ, ಗೌಡಪ್ಪ ಹಲಕುರ್ಕಿ, ಸುವರ್ಣ ಉಚಡಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT