
ಪ್ರಜಾವಾಣಿ ವಾರ್ತೆಬಾಗಲಕೋಟೆ: ತಾಲ್ಲೂಕಿನ ಲವಳೇಶ್ವರ ತಾಂಡಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಮಂಗಳವಾರ ಸಂಜೆ ರಥೋತ್ಸವದ ವೇಳೆ ತೇರಿನದ ಚಕ್ರ ತಲೆಗೆ ಬಡಿದು ಭಕ್ತರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬರ ಕಾಲು ಕತ್ತರಿಸಿವೆ.
ಸಮೀಪದ ಜಡ್ರಾಮಕುಂಟಿ ಗ್ರಾಮದ ಬಸಪ್ಪ ಬಿಂಗಿ (28) ಸಾವಿಗೀಡಾದವರು. ಅದೇ ಗ್ರಾಮದ ಶರಣಪ್ಪ ಕುಂಬಾರ ಕಾಲು ಕಳೆದುಕೊಂಡವರು.
ತೇರು ಹರಿಯುವಾಗ ಚಕ್ರದ ಬಳಿಯೇ ಇದ್ದ ಇಬ್ಬರೂ ನೂಕು–ನುಗ್ಗಲಿನಲ್ಲಿ ಆಯತಪ್ಪಿ ಚಕ್ರಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.