ADVERTISEMENT

ಪಂಚಮಸಾಲಿ ಪೀಠ: ನೂತನ ಪೀಠಾಧಿಪತಿಯಿಂದ ಕೃಷ್ಣೆಗೆ ಆರತಿ, ರುದ್ರಾಕ್ಷಿ ಕಿರೀಟ ಧಾರಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 5:40 IST
Last Updated 13 ಫೆಬ್ರುವರಿ 2022, 5:40 IST
ನೂತನ ಪೀಠಾಧಿಪತಿಯಿಂದ ಕೃಷ್ಣೆಗೆ ಆರತಿ, ರುದ್ರಾಕ್ಷಿ ಕಿರೀಟ ಧಾರಣೆ
ನೂತನ ಪೀಠಾಧಿಪತಿಯಿಂದ ಕೃಷ್ಣೆಗೆ ಆರತಿ, ರುದ್ರಾಕ್ಷಿ ಕಿರೀಟ ಧಾರಣೆ   

ಬಾಗಲಕೋಟೆ : ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠದ ನೂತನ ಪೀಠಾಧಿಪತಿ ಷ.ಬ್ರ. ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಭಾನುವಾರ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಆರತಿ ಕಾರ್ಯಕ್ರಮ ನಡೆಯಿತು.

ಪೀಠಾರೋಹಣದ ಧಾರ್ಮಿಕ ಕಾರ್ಯಕ್ರಮ ಬಳಿಕ ಕೃಷ್ಣೆಗೆ ಆರತಿ ಕಾರ್ಯಕ್ರಮ ನಡೆಯಿತು.

ಅದಕ್ಕೂ ಮುನ್ನ ನೂತನ ಪೀಠಾಧಿಪತಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು.

ADVERTISEMENT

ರುದ್ರಾಕ್ಷಿ ಕಿರೀಟ ಧಾರಣೆ ಕಾರ್ಯಕ್ರಮದಲ್ಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ,ಮನಗೂಳಿ ಹಿರೇಮಠದ ಸಂಗನಬಸವ ಶ್ರೀ, ಪೀಠಾರೋಹಣ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.