ADVERTISEMENT

ಕೋವಿಡ್ ಪಾಸಿಟಿವ್ ಮಾಹಿತಿ ಮುಚ್ಚಿಟ್ಟ ಫಾರ್ಮಾಸಿಸ್ಟ್ ಸಸ್ಪೆಂಡ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:59 IST
Last Updated 29 ಏಪ್ರಿಲ್ 2021, 15:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗಲಕೋಟೆ: ಕೋವಿಡ್ ದೃಢಪಟ್ಟಿರುವ ಮಾಹಿತಿ ಮುಚ್ಚಿಟ್ಟು ಉಳಿದ ಸಿಬ್ಬಂದಿಯ ಜೊತೆ ಬೆರೆತು ಕೆಲಸ ಮಾಡಿದ್ದ ಮುಧೋಳ ತಾಲ್ಲೂಕು ಆಸ್ಪತ್ರೆ ಫಾರ್ಮಾಸಿಸ್ಟ್ ಅವರನ್ನು ಜಿಲ್ಲಾಧಿಕಾರಿ ಗುರುವಾರ ಅಮಾನತು ಮಾಡಿದ್ದಾರೆ.

ಫಾರ್ಮಾಸಿಸ್ಟ್ಗೆ ಎರಡು ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಆ ಮಾಹಿತಿ ಮುಚ್ಚಿಟ್ಟು ಎಲ್ಲರೊಂದಿಗೆ ಬೆರೆತಿದ್ದಾರೆ.

ಆಸ್ಪತ್ರೆಯಲ್ಲಿ ಓಡಾಡಿ ಎರಡು ದಿನ ಕೆಲಸ ಮಾಡಿದ್ದಾರೆ. ತನಗೆ ಸೋಂಕು ದೃಢಪಟ್ಟಿರುವ ವಿಚಾರ ಯಾರಿಗೂ ಹೇಳದಂತೆ ವಿಷಯ ಗೊತ್ತಿದ್ದ ಅಧೀನ ಸಿಬ್ಬಂದಿಗೂ ತಾಕೀತು ಮಾಡಿದ್ದರು ಎನ್ನಲಾಗಿದೆ.

ADVERTISEMENT

ವಿಷಯ ಬಹಿರಂಗವಾಗುತ್ಯಿದ್ದಂತೆಯೇ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಫಾರ್ಮಾಸಿಸ್ಟ್ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.