ADVERTISEMENT

ಪೊಲೀಸ್ ಎಂದರೆ ಭಯ ಅಲ್ಲ ಭರವಸೆ: ಸರ್ಕಲ್ ಇನ್‌ಸ್ಪೆಕ್ಟರ್‌ ಸಣಮನಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:16 IST
Last Updated 17 ಜೂನ್ 2025, 13:16 IST
ಬೀಳಗಿಯ ಸರ್ಕಾರಿ ಆದರ್ಶ‌ ವಿದ್ಯಾಲಯದಲ್ಲಿ ಪ್ರಾಥಮಿಕ‌ ಶಾಲಾ ಮುಖ್ಯಗುರುಗಳಿಗಾಗಿ ಇತ್ತೀಚೆಗೆ ಏರ್ಪಡಿಸಿದ ಶಾಲಾ ಸುರಕ್ಷತೆ‌ ಹಾಗೂ‌ ಪೋಕ್ಸೊ ಕಾಯ್ದೆ ಕುರಿತು ಸಿಪಿಐ ಎಚ್.ಬಿ.ಸಣಮನಿ ಮಾಹಿತಿ ನೀಡಿದರು
ಬೀಳಗಿಯ ಸರ್ಕಾರಿ ಆದರ್ಶ‌ ವಿದ್ಯಾಲಯದಲ್ಲಿ ಪ್ರಾಥಮಿಕ‌ ಶಾಲಾ ಮುಖ್ಯಗುರುಗಳಿಗಾಗಿ ಇತ್ತೀಚೆಗೆ ಏರ್ಪಡಿಸಿದ ಶಾಲಾ ಸುರಕ್ಷತೆ‌ ಹಾಗೂ‌ ಪೋಕ್ಸೊ ಕಾಯ್ದೆ ಕುರಿತು ಸಿಪಿಐ ಎಚ್.ಬಿ.ಸಣಮನಿ ಮಾಹಿತಿ ನೀಡಿದರು   

ಬೀಳಗಿ: ಪೊಲೀಸ್‌ ಅಂದರೆ ಭಯ ಅಲ್ಲ ಅದು ಭರವಸೆ. ಜನರಿಗೆ ಭದ್ರತೆ ನೀಡಲು, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಸಿದ್ದವಾಗಿದೆ ಎಂದು ಬೀಳಗಿ ಸರ್ಕಲ್ ಇನ್‌ಸ್ಪೆಕ್ಟರ್‌ ಎಚ್.ಬಿ. ಸಣಮನಿ ಹೇಳಿದರು.

ಸ್ಥಳೀಯ ಸರ್ಕಾರಿ ಆದರ್ಶ‌ ವಿದ್ಯಾಲಯದಲ್ಲಿ ಪ್ರಾಥಮಿಕ‌ ಶಾಲಾ ಮುಖ್ಯ ಗುರುಗಳಿಗಾಗಿ ಇತ್ತೀಚೆಗೆ ಏರ್ಪಡಿಸಿದ ಶಾಲಾ ಸುರಕ್ಷತೆ‌ ಹಾಗೂ‌ ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ಒದಗಿಸುವ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯ ಗುರುಗಳ ಸಮಸ್ಯೆಗಳನ್ನು ಆಲಿಸಿ ಶಾಲಾ ಆವರಣದ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಾಡುವ ಅಪರಾಧ ಚಟುವಟಿಕೆಗಳು, ವೈಯಕ್ತಿಕ ಡೇಟಾ ಕದಿಯುವುದು, ಆರ್ಥಿಕ ವಂಚನೆ ಮಾಡುವುದು, ದುರುದ್ದೇಶಪೂರಿತ ಸಾಫ್ಟ್‌ವೇರ್ ಹರಡುವುದು, ಡಿಜಿಟಲ್‌ ಅರೆಸ್ಟ್‌ ಇತರೆ ಆನ್‌ಲೈನ್ ಅಪರಾಧಗಳ ಜಾಗರೂಕತೆಯ ಕ್ರಮಗಳು ಹಾಗೂ ಸೈಬರ್‌ ಕಾನೂನು ಬಗ್ಗೆ ತಿಳಿಸಿದರು.

ಪೊಲೀಸ್‌, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆಗಳಿಗಾಗಿ ದೇಶಕ್ಕೊಂದೇ ನಂಬರ್ '112'‌ ಜಾರಿಗೆ ಬಂದಿದ್ದು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ಮಾತನಾಡಿ, ಶಾಲೆಯಲ್ಲಿರುವ ಮಕ್ಕಳು ಹಾಗೂ ಶಿಕ್ಷಕರಿಗೆ ಸುರಕ್ಷತೆ  ಒದಗಿಸುವುದು ಅತ್ಯವಶ್ಯಕವಾಗಿದೆ. ಪೊಲೀಸ್‌ ಇಲಾಖೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬ್ಳೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಿವಾಜಿ ನಾಯಕ , ಶಿಕ್ಷಣ ಸಂಯೋಜಕ ಜಗದೀಶ ಖೋತ, ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಸಿದ್ದು ಬೂದಿಹಾಳ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಜಿ.ಎಲ್. ಮುಲ್ಲಾ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಬಾರಾಗಣಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.