
ರಬಕವಿ ಬನಹಟ್ಟಿ: ಇಲ್ಲಿನ ಮಂಗಳವಾರ ಪೇಟೆಯಲ್ಲಿ ಭಾನುವಾರ ಪ್ರತಿಯೊಂದು ವಸ್ತುಗಳು ದುಪ್ಪಟ್ಟು ಬೆಲೆಗೆ ಮಾರಾಟಗೊಂಡಿದ್ದರಿಂದ ಮಹಾಶಿವರಾತ್ರಿ ಆಚರಣೆ ಸಾಮಾನ್ಯ ಜನರಿಗೆ ಬಹಳಷ್ಟು ದುಬಾರಿ ಎನಿಸಿತು.
ಬಾಳೆ ಹಣ್ಣು ಕೆ.ಜಿಗೆ ₹80ರಿಂದ ₹100, ದ್ರಾಕ್ಷಿ ₹150 ಸೇರಿದಂತೆ ಕಲ್ಲಂಗಡಿ, ಚಿಕ್ಕು ಹಣ್ಣುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಯಿತು. ಗೆಣಸು ಕೆ.ಜಿಗೆ ₹30 ಇತ್ತು.
ಸಾಬೂದಾನಿ, ಬೆಲ್ಲ, ಖರ್ಜೂರು ಮತ್ತು ಶೇಂಗಾ ಮಾರಾಟ ಜೋರಾಗಿತ್ತು. ಶೇಂಗಾ ಕೆ.ಜಿಗೆ ₹150ರಿಂದ ₹160 ದರ ನಿಗದಿಮಾಡಲಾಗಿತ್ತು.
ಸಂಚಾರಕ್ಕೆ ತೊಂದರೆ: ಶಿವರಾತ್ರಿ ಆಚರಣೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಸೇರಿದ್ದರಿಂದ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಅಂಗಡಿಗಳು ಮತ್ತು ದ್ವಿಚಕ್ರ ವಾಹನಗಳು ರಸ್ತೆ ಬದಿಯೇ ಇದ್ದಿದ್ದರಿಂದ ಸಮಸ್ಯೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.