ADVERTISEMENT

ರಬಕವಿ ಬನಹಟ್ಟಿ: ಮಲ್ಲಯ್ಯನ ಕಂಬಿಗಳ ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:11 IST
Last Updated 10 ಏಪ್ರಿಲ್ 2025, 14:11 IST
ಬನಹಟ್ಟಿಯಲ್ಲಿ ದೇವರನ್ನು ಕರೆದುಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಮಲ್ಲಯ್ಯನ ಕಂಬಿಗಳಿಗೆ ಪೂಜೆ ಮತ್ತು ನೈವೇದ್ಯ ಸಲ್ಲಿಸಿದರು
ಬನಹಟ್ಟಿಯಲ್ಲಿ ದೇವರನ್ನು ಕರೆದುಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಮಲ್ಲಯ್ಯನ ಕಂಬಿಗಳಿಗೆ ಪೂಜೆ ಮತ್ತು ನೈವೇದ್ಯ ಸಲ್ಲಿಸಿದರು   

ರಬಕವಿ ಬನಹಟ್ಟಿ: ನಗರದಲ್ಲಿ ಗುರುವಾರ ಮಲ್ಲಯ್ಯನ ಕಂಬಿಗಳ ಪುರಪ್ರವೇಶದ ಜೊತೆಗೆ ದೇವರನ್ನು ಕರೆದುಕೊಳ್ಳುವ ಕಾರ್ಯಕ್ರಮ ಸಡಗರದಿಂದ ನಡೆಯಿತು.

ನಗರದ ಅರಳಿಕಟ್ಟಿಯಲ್ಲಿ ಬೆಳಿಗ್ಗೆ ಮಲ್ಲಯ್ಯನ ಕಂಬಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ನಗರದ ಹಿರಿಯರು ಸಾಮೂಹಿಕ ಮಂಗಳಾರತಿ ನೆರವೇರಿಸಿದ ನಂತರ ಮಹಿಳೆಯರು ಮಲ್ಲಯ್ಯನ ಕಂಬಿಗಳಿಗೆ ಪೂಜೆ ಸಲ್ಲಿಸಿ, ಆರತಿ ಮಾಡಿ, ನೈವೇದ್ಯ ಸಲ್ಲಿಸಿದರು.

ಮಹಿಳೆಯರು ಆರತಿ ಮತ್ತು ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಮಂಗಳಾರತಿಯಲ್ಲಿ ಭಾಗವಹಿಸಿದ್ದರು.

ADVERTISEMENT

ಸಂಜೆ ಅರಳಿಕಟ್ಟಿಯಿಂದ ಮಲ್ಲಯ್ಯನ ಕಂಬಿಗಳನ್ನು ಮೆರವಣಿಗೆಯ ಮೂಲಕ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಇಲ್ಲಿ ಐದು ದಿನ ರಾತ್ರಿ ಸಾಮೂಹಿಕ ಮಂಗಳಾರತಿ ನೆರವೇರುತ್ತದೆ. 5ನೇ ದಿನ ಐದೇಶಿ ಕಾರ್ಯಕ್ರಮದ ಅಂಗವಾಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಐದು ಗಂಟೆ ಬೆಲ್ಲ ಹಂಚುವ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಸಿದ್ದನಗೌಡ ಪಾಟೀಲ, ರಾಜಶೇಖರ ಮಾಲಾಪುರ, ಶ್ರೀಶೈಲ ಧಬಾಡಿ, ದಾನಪ್ಪ ಹುಲಜತ್ತಿ, ಬಸವರಾಜ ಜಾಡಗೌಡ, ಬಸವರಾಜ ಗುಂಡಿ, ಸುಭಾಸ ಜಾಡಗೌಡ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.