
ರಬಕವಿ ಬನಹಟ್ಟಿ: ಬನಹಟ್ಟಿಯಲ್ಲಿ ವಿಶಾಲ ಹಿಂದೂ ಸಮಾವೇಶದ ಅಂಗವಾಗಿ ಶನಿವಾರ ನಡೆದ ಹಮ್ಮಿಕೊಂಡಿದ್ದ ಬೃಹತ್ ಶೋಭಾ ಯಾತ್ರೆಯಲ್ಲಿ ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಐದು ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದರು.
ವೈಭವ ಚಲನಚಿತ್ರ ಮಂದಿರದ ಹತ್ತಿರ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮತ್ತು ಶಾಸಕ ಸಿದ್ದು ಸವದಿ ಅವರು ಭಾರತ ಮಾತೆ, ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಛದ್ಮವೇಷ ತೊಟ್ಟಿದ್ದವರಿಗೆ ಪುಷ್ಪಾರ್ಚನೆ ಮಾಡಿ, ಶೋಭಾಯಾತ್ರೆಗೆ ಚಾಲನೆ ನೀಡಿದರು.
ಕರಡಿಮಜಲು, ಸಂಬಾಳ, ಹಲಗೆ, ಡೊಳ್ಳು, ಸಾರವಾಡದ ಗೊಂಬೆ ಕುಣಿತ, ಮಕ್ಕಳ ಛದ್ಮವೇಷ, ಮಹಿಳೆಯರ ತಾಳ ಮತ್ತು ಕೋಲಾಟ ಮೆರುಗು ತಂದಿತು. ಘೋಷಣೆಗಳು ಮೊಳಗಿದವು.
ಬನಹಟ್ಟಿ ದೈವ ಮಂಡಳಿ, ವ್ಯಾಪಾರಸ್ಥರ ಸಂಘ, ವೈದ್ಯರು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ಸಂಚಲನಾ ಸಮಿತಿ ಅಧ್ಯಕ್ಷ ಶ್ರೀಶೈಲ ಗೊಂಬಿ, ಬ್ರಿಜ್ಮೋಜನ ಚಿಂಡಕ, ಶಂಕರ ವಸ್ತ್ರದ, ಗಿರೀಶ ಕಾಡದೇವರ, ಮೋಹನ ಪತ್ತಾರ, ಶಿವಾನಂದ ಗಾಯಕವಾಡ, ಸದಾಶಿವ ತಟಕೋಟ, ಸಂಗಮೇಶ ಚನಾಳ, ಈರಯ್ಯ ಪರಾಳಮಠ, ಸಾವಿತ್ರಿ ಕಾಡದೇವರ, ಶಾಂತಾ ಸೋರಗಾವಿ, ಮಾಲಾ ಬಾವಲತ್ತಿ, ಗೌರಿ ಮಿಳ್ಳಿ, ಗೀತಾ ಭಟ್ಟಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.