ಬಾದಾಮಿ: ರಾಮನವಮಿ ಅಂಗವಾಗಿ ದೇವಾಲಯದಲ್ಲಿ ರಾಮಮೂರ್ತಿಗೆ ಅರ್ಚಕರು ವಿವಿಧ ಪೂಜಾ ಕೈಂಕರ್ಯ ನಡೆಸಿದರು.
ಇಲ್ಲಿನ ಮ್ಯೂಜಿಯಂ ರಸ್ತೆಯ ಪಕ್ಕದಲ್ಲಿರುವ ಪ್ರಾಚೀನ ಶ್ರೀರಾಮ ದೇವಾಲಯದಲ್ಲಿ ಭಕ್ತರು ಶ್ರದ್ಧೆ, ಭಕ್ತಿಯು ಸಂಭ್ರಮದಿಂದ ರಾಮನವಮಿಯನ್ನು ಆಚರಿಸಿದರು.
ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ, ತೊಟ್ಟಿಲೋತ್ಸವ ಮತ್ತು ಮಹಿಳಾ ಮಂಡಳದಿಂದ ಭಜನಾ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಮಾರುತಿ ದೇವಾಲಯದ ಪಕ್ಕದಲ್ಲಿರುವ ಶ್ರೀರಾಮ ಮೂರ್ತಿಗೆ ಮತ್ತು ನೇಕಾರ ಓಣಿಯಲ್ಲಿರುವ ಶ್ರೀರಾಮಲಿಂಗೇಶ್ವರ ಮೂರ್ತಿಗೆ ಅರ್ಚಕರು ಮತ್ತು ಭಕ್ತರು ಪೂಜೆಯನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.