ADVERTISEMENT

ರಾಮದುರ್ಗ–ಮಾನ್ವಿ ರಾಜ್ಯ ಹೆದ್ದಾರಿ: ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 3:05 IST
Last Updated 6 ಜುಲೈ 2025, 3:05 IST
ಹುನಗುಂದ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿಯ ನವೀಕರಣ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು
ಹುನಗುಂದ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿಯ ನವೀಕರಣ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು   

ಹುನಗುಂದ: ‘ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ, ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿ 14ರಲ್ಲಿನ ಅಪೂರ್ಣ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುತ್ತಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಶನಿವಾರ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ತಾಲ್ಲೂಕಿನಲ್ಲಿ ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿಯಲ್ಲಿ ₹5 ಕೋಟಿ ವೆಚ್ಚದ ನವೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಹೆದ್ದಾರಿಯಲ್ಲಿ ಬರುವ ತಾಲ್ಲೂಕಿನ ಹಗೇದಾಳ, ರಾಮವಾಡಗಿ ಕ್ರಾಸ್, ಹಿರೇಬಾದವಾಡಗಿ, ಚಿತ್ತವಾಡಗಿ ಕ್ರಾಸ್, ನಾಗೂರ, ಗುಡೂರ, ಚಿಕನಾಳ ಹಾಗೂ ಭೀಮನಗಡ ಗ್ರಾಮಗಳಲ್ಲಿ ಒಟ್ಟು 13.26 ಕಿ.ಮೀ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈಗಾಗಲೇ ಈ ಮಾರ್ಗವನ್ನು 3 ಮೀಟರ್ ದಿಂದ 5 ಮೀಟರ್‌ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದರು

ADVERTISEMENT

‘ರಾಜ್ಯ ಸರ್ಕಾರ ಮತಕ್ಷೇತ್ರದ ಎಲ್ಲ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ಮಂಜೂರು’ ಮಾಡಿದೆ ಎಂದರು.

ಮುಖಂಡರಾದ ಶಿವಾನಂದ ಕಂಠಿ, ಬಸವರಾಜ ಗದ್ದಿ, ಸಂಗಣ್ಣ ಗಂಜೀಹಾಳ, ನಾಗೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಗವ್ವ ಮಾದರ, ಎಸ್. ಜಿ. ಆನಂದಪ್ಪನವರ, ತಾಲ್ಲೂಕು ಪಂಚಾಯ್ತಿ ಇಒ ಮುರುಳಿ ದೇಶಪಾಂಡೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಐ. ಜಿ. ಹಿರೇಮಠ ಇತರರಿದ್ದರು.

ಹುನಗುಂದ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ರಾಮದುರ್ಗ-ಮಾನ್ವಿ ರಾಜ್ಯ ಹೆದ್ದಾರಿಯ ನವೀಕರಣ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು
ತಾಲ್ಲೂಕಿನ ವಿವಿಧಡೆ ಲೋಕೋಪಯೋಗಿ ಇಲಾಖೆ ವತಿಯಿಂದ ₹ 15 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ
ವಿಜಯಾನಂದ ಕಾಶಪ್ಪನವರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.