ADVERTISEMENT

ನದಿಯಲ್ಲಿ ಕೊಚ್ಚಿಕೊಂಡು ಹೋದ ರೈತನ ಕುಟುಂಬಕ್ಕೆ ಪರಿಹಾರ: ಸಚಿವ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:59 IST
Last Updated 14 ಆಗಸ್ಟ್ 2024, 15:59 IST
ಜಮಖಂಡಿ:ತಾಲ್ಲೂಕಿನ ಕಂಕಣವಾಡಿ ಗ್ರಾಮದ ಈಶ್ವರ ಸಿದಣ್ಣವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೆಟ್ಟಿ ನೀಡಿ ಸರ್ಕಾರದಿಂದ ಐದು ಲಕ್ಷ ಪರಿಹಾರ ಚೆಕ್ ವಿತರಿಸಿದರು.
ಜಮಖಂಡಿ:ತಾಲ್ಲೂಕಿನ ಕಂಕಣವಾಡಿ ಗ್ರಾಮದ ಈಶ್ವರ ಸಿದಣ್ಣವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೆಟ್ಟಿ ನೀಡಿ ಸರ್ಕಾರದಿಂದ ಐದು ಲಕ್ಷ ಪರಿಹಾರ ಚೆಕ್ ವಿತರಿಸಿದರು.   

ಜಮಖಂಡಿ: ‘ಹಾನಿಗೀಡಾದ ಪ್ರದೇಶದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ, ಹಾನಿಯನ್ನು ನೋಡಿಕೊಂಡು ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಈಚೆಗೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಿಧನರಾದ ರೈತ ಈಶ್ವರ ಸಿದ್ಧನವರ ನಿವಾಸಕ್ಕೆ ಬುಧವಾರ ಭೆಟ್ಟಿ ನೀಡಿ ಸರ್ಕಾರದಿಂದ ₹ 5 ಲಕ್ಷ ಪರಿಹಾರ ಚೆಕ್ ವಿತರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.

ಮುಳುಗಡೆ ಆಗಿರುವ ಜಮೀನುಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ ಅವುಗಳನ್ನು ಆದಷ್ಟೂ ಬೇಗಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ADVERTISEMENT

ಹಲವಾರು ವರ್ಷಗಳಿಂದ ಪ್ರವಾಹ ಬರುತ್ತಿದೆ, ಬೆಳೆ ಹಾನಿಯಾಗುತ್ತಿವೆ, ಈ ಬಗ್ಗೆ ಅಧಿಕಾರಿಗಳಿಂದ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.

ಈ ಭಾಗದಲ್ಲಿ ಹೆಚ್ಚು ನೀರು ನಿಲ್ಲುತ್ತಿರುವ ಬಗ್ಗೆ ಸರ್ವೆ ಮಾಡಿಸಲಾಗುವುದು ಸರ್ವೆ ವರದಿ ಬಂದ
ನಂತರ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಾಗುವುದು. ಜಮಖಂಡಿ ತಾಲ್ಲೂಕಿನಲ್ಲೇ ಪ್ರವಾಹದಿಂದ 3 ಜನರು ಸಾವನಪ್ಪಿರುವದು ದುರ್ದೈವದ ಸಂಗತಿ. ಪ್ರವಾಹ ಬಂದಾಗ ರೈತರು ಕಾಳಜಿ ವಹಿಸಬೇಕು, ನೀರಿಗೆ ಇಳಿಯಬಾರದು ಎಂದು ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು ಎಂದರು.

ಮುಖಂಡ ತೌಫೀಕ ಪಾರ್ಥನಳ್ಳಿ, ಎಸಿ ಶ್ವೇತಾ ಬೀಡಿಕರ, ಡಿವೈಎಸ್‌ಪಿ ಶಾಂತವೀರ ಈ, ತಹಶೀಲ್ದಾರ್‌ ಸದಾಶಿವ ಮಕ್ಕೋಜಿ, ತಾಲ್ಲೂಕು ಪಮಚಾಯಿತಿ ಇಒ ಸಂಜಿವ ಜುನ್ನೂರ, ಸಿದ್ದಾರ್ಥ ಗೋಠೆ ಇದ್ದರು.

ಜಮಖಂಡಿ:ತಾಲ್ಲೂಕಿನ ಕಂಕಣವಾಡಿ ಗ್ರಾಮದ ಈಶ್ವರ ಸಿದಣ್ಣವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೆಟ್ಟಿ ನೀಡಿ ಸರ್ಕಾರದಿಂದ ಐದು ಲಕ್ಷ ಪರಿಹಾರ ಚೆಕ್ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.