ADVERTISEMENT

ದೇಶ ಸೇವೆಯು ಸಂತೃಪ್ತಿ ತಂದಿದೆ: ನಿವೃತ್ತ ಸೈನಿಕ ಚನ್ನಯ್ಯ ಜಾಲಿಹಾಳ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:52 IST
Last Updated 5 ಅಕ್ಟೋಬರ್ 2025, 4:52 IST
ಬಾದಾಮಿ ಸಮೀಪದ ನೆಲವಗಿ ಗ್ರಾಮದಲ್ಲಿ ನಿವೃತ್ತ ಸೈನಿಕ ಚನ್ನಯ್ಯ ಜಾಲಿಹಾಳ ಸನ್ಮಾನ ಪಡೆದು ಮಾತನಾಡಿದರು
ಬಾದಾಮಿ ಸಮೀಪದ ನೆಲವಗಿ ಗ್ರಾಮದಲ್ಲಿ ನಿವೃತ್ತ ಸೈನಿಕ ಚನ್ನಯ್ಯ ಜಾಲಿಹಾಳ ಸನ್ಮಾನ ಪಡೆದು ಮಾತನಾಡಿದರು   

ಬಾದಾಮಿ: ‘ನನ್ನ ತಾಯಿಯ ಕನಸಿನಂತೆ ನಾನು ದೇಶ ಸೇವೆಗಾಗಿ ಹೋದೆ. 22 ವರ್ಷಗಳ ಕಾಲ ಉತ್ಸಾಹದಿಂದ ಸೈನಿಕ ಸ್ನೇಹಿತರೊಂದಿಗೆ ದೇಶೆ ಸೇವೆ ಮಾಡಿದೆ. ತಾಯ್ನಾಡಿಗೆ ಬಂದಿರುವುದು ಖುಷಿ ತಂದಿದೆ. ದೇಶ ಸೇವೆಗೆ ಮತ್ತೆ ಕರೆ ಬಂದರೆ ಹೋಗುವೆ’ ಎಂದು ನಿವೃತ್ತ ಸೈನಿಕ ಚನ್ನಯ್ಯ ಜಾಲಿಹಾಳ ಹೇಳಿದರು.

ತಾಲ್ಲೂಕಿನ ನೆಲವಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ಗ್ರಾಮಸ್ಥರು ನಿವೃತ್ತ ಸೈನಿಕನನ್ನು ಸಂಭ್ರಮದಿಂದ ಸ್ವಾಗತಿಸಿ ಅವರು ಸನ್ಮಾನಿಸಿದರು.

‘ಎಲ್ಲ ತಾಯಂದಿರು ನನ್ನ ಮಗ ವೈದ್ಯನಾಗಬೇಕು, ಇಲ್ಲವೇ ಎಂಜಿನಿಯರ್ ಆಗಬೇಕು ಎಂಬ ಕನಸು ಕಟ್ಟಿರುವರು. ಆದರೆ ನನ್ನ ತಾಯಿ ಮಗ ಸೈನಿಕನಾಗಬೇಕೆಂಬ ಆಶೆಯಂತೆ ಸೈನಿಕನಾದೆ’ ಎಂದರು.

ADVERTISEMENT

‘ನಮ್ಮ ದೇಶದಲ್ಲಿ ಸೈನಿಕರಿಗೆ ಅಪಾರವಾದ ಗೌರವವಿದೆ. ಸರ್ಕಾರಗಳು ನಮ್ಮನ್ನು ಗೌರವದಿಂದ ಕಂಡು ಉತ್ತಮ ಸೌಲಭ್ಯಗಳನ್ನು ಕೊಟ್ಟಿದ್ದಾರೆ. ತಾಯಂದಿರು ಮಕ್ಕಳಲ್ಲಿ ದೇಶ ಭಕ್ತಿಯನ್ನು ಬೆಳೆಸಿ. ಪ್ರತಿಯೊಂದು ಕುಟುಂಬದಲ್ಲಿ ದೇಶ ಸೇವೆಗೆ ಮಕ್ಕಳನ್ನು ಕಳಿಸಿ’ ಎಂದು ನಿವೃತ್ತ ಸೈನಿಕ ಅನುಭವಗಳನ್ನು ಹಂಚಿಕೊಂಡರು.

‘ಗ್ರಾಮೀಣ ಪ್ರದೇಶದ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳಿಸುವ ಕಾರ್ಯ ಶ್ಲಾಘನೀಯ. ಮಕ್ಕಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನ ಬೆಳೆಯಿಸಿರಿ’ ಎಂದು ಶರಣಬಸವ ಸ್ವಾಮೀಜಿ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಗಾರವಾಡ, ಅಂದಯ್ಯ ರೋಣದ, ಶಂಕರ ದಳವಾಯಿ, ಮಹಾಗುಂಡಪ್ಪ, ಯಮನೂರ ಕುಳಗೇರಿ, ಅನಿಯಪ್ಪ ಕೊಕಾಟಿ, ರಂಗಪ್ಪ ಮೊಕಾಶಿ, ಕನಕವ್ವ ಮಾದರ, ದ್ರಾಕ್ಷಾಯಣಿ ಬಾಪಲಿ, ಮಾನಗೌಡ ಗೌಡರ, ಗಿರಿಜಾ ದಳವಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.