ADVERTISEMENT

ತೇರದಾಳ: ರಸ್ತೆ ಗುಂಡಿ ಮುಚ್ಚಿದ ಆಟೊ ಚಾಲಕರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:50 IST
Last Updated 17 ಜೂನ್ 2025, 15:50 IST
<div class="paragraphs"><p>ತೇರದಾಳದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಆಟೊ ಚಾಲಕರು ಮುಚ್ಚುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದರು.</p></div>

ತೇರದಾಳದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಆಟೊ ಚಾಲಕರು ಮುಚ್ಚುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದರು.

   

ತೇರದಾಳ: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಟಾರು ಕಿತ್ತು ಹೋಗಿ ಗುಂಡಿಯಾಗಿ ಸಂಚಾರಿಗಳಿಗೆ ತೊಂದರೆಯಾಗುತ್ತಿದ್ದ ಗುಂಡಿಗಳನ್ನು ಆಟೊ ಚಾಲಕರಿಬ್ಬರು ಮುಚ್ಚುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ಮೆರೆದರು.

ಬಸ್ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಎರಡು ಆಳವಾದ ಗುಂಡಿಗಳು ರಸ್ತೆಯಲ್ಲಿ ಉಂಟಾಗಿದ್ದವು. ಅವು ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿರುವುದನ್ನು ಅಟೋ ಚಾಲಕರಾದ ದಾವುದ ನಾಯಕವಾಡಿ, ರಿಯಾಜ ಸಂಗತ್ರಾಸ ಗಮನಿಸಿದರು.  ಭಾನುವಾರ ಬೆಳಗಿನ ಜಾವ ರಸ್ತೆ ಬದಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಗಳು ವ್ಯಕ್ತವಾದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.