ADVERTISEMENT

ಸಂಸ್ಕೃತಿ ಉಳಿಸಿ: ಶಿವಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 11:34 IST
Last Updated 24 ಸೆಪ್ಟೆಂಬರ್ 2020, 11:34 IST
ಇಲ್ಲಿನ ಮುತ್ತಿನಕಂತಿ ಹಿರೇಮಠದ ಆವರಣದಲ್ಲಿ ಚೈತ್ರಾ ಕುಂದಾಪೂರ ಅವರ ‘ಪ್ರೇಮಪಾಶ; ಪ್ರೀತಿಯೆಂಬ ಜಿಹಾದಿನ ಪರದೆ ಸರಿಯಿತು’ ಎಂಬ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು
ಇಲ್ಲಿನ ಮುತ್ತಿನಕಂತಿ ಹಿರೇಮಠದ ಆವರಣದಲ್ಲಿ ಚೈತ್ರಾ ಕುಂದಾಪೂರ ಅವರ ‘ಪ್ರೇಮಪಾಶ; ಪ್ರೀತಿಯೆಂಬ ಜಿಹಾದಿನ ಪರದೆ ಸರಿಯಿತು’ ಎಂಬ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು   

ಜಮಖಂಡಿ: ಧರ್ಮದ ಬಗ್ಗೆ ಪ್ರತಿಯೊಬ್ಬ ಹಿಂದೂ ಗೌರವ ಇಟ್ಟುಕೊಳ್ಳಬೇಕು. ಇಂದಿನ ಯುವಜನ ಭಾರತೀಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು. ಯುವತಿಯರು ಸಂಸ್ಕೃತಿ– ಪರಂಪರೆಯನ್ನು ಉಳಿಸಲು ಮುಂದೆ ಬರಬೇಕು ಎಂದು ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಮುತ್ತಿನಕಂತಿ ಹಿರೇಮಠದ ಆವರಣದಲ್ಲಿ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪೂರ ರಚಿಸಿದ ‘ಪ್ರೇಮಪಾಶ; ಪ್ರೀತಿಯೆಂಬ ಜಿಹಾದಿನ ಪರದೆ ಸರಿಯಿತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರದೀಪ್ ಮೆಟಗುಡ್ದ, ವಿಠ್ಠಲ್ ಪರೀಟ್, ಶಶಿ ಜಗದಾಳ, ರಘು ಭೂವಿ, ಕುಮಾರ್ ಮಾಳಿ, ಸೋಮು ಕಲ್ಯಾಣಶೆಟ್ಟಿ, ಮಂಜು ಜಕ್ಕಪ್ಪನವರ, ಪ್ರಕಾಶ್ ಅರಿಕೇರಿ, ಮಲ್ಲಿಕಾರ್ಜುನ ಮಾಳಿ, ಶ್ರೀಶೈಲ್ ಮಾಡಗ್ಯಾಲ, ಗೀತಾ ಸೂರ್ಯವಂಶಿ, ಮಹಾನಂದಾ ಪಾಯಗೊಂಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT